alex Certify ಉತ್ತರ ಪ್ರದೇಶದಲ್ಲಿ 8ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ ಯತ್ನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ 8ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ ಯತ್ನ..!

ಉತ್ತರ ಪ್ರದೇಶದ ಬರೇಲಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ 12 ವರ್ಷದ ಬಾಲಕಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯ ತಾಯಿ ನೀಡಿದ ದೂರನ್ನ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಸ್ಟೇಷನ್​ ಹೌಸ್​ ಅಧಿಕಾರಿ ಕೆ.ಕೆ. ವರ್ಮಾ ಮಾಹಿತಿ ನೀಡಿದ್ದಾರೆ.

ಅಲ್ಲದೇ 14 ವರ್ಷದ ಬಾಲಕನ ಕುಟುಂಬದ ಮೂವರ ವಿರುದ್ದ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ಮಂಗಳವಾರ ಮಧ್ಯಾಹ್ನ ಕೆಲಸದಿಂದ ಮನೆಗೆ ಹಿಂದಿರುಗಿದ ವೇಳೆ ಬಾಲಕಿಯ ತಾಯಿ ಮನೆಯ ಒಳಗಡೆ ಮಗಳು ಕಿರುಚಾಡುತ್ತಿರೋದು ಗಮನಕ್ಕೆ ಬಂದಿದೆ.

ಬಾಲಕಿಯ ತಾಯಿ ಮನೆಯ ಒಳಗೆ ಬಂದ ವೇಳೆ ಅಪ್ರಾಪ್ತ ಬಾಲಕ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿರೋದನ್ನ ಕಣ್ಣಾರೆ ಕಂಡಿದ್ದಾಳೆ. ಬಾಲಕಿಯ ತಾಯಿಯನ್ನ ಕಂಡೊಡನೆಯೇ ಅಲ್ಲಿಂದ ಓಡಲು ಯತ್ನಿಸಿದ ಬಾಲಕ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...