alex Certify ಗಡಿಯಲ್ಲಿ 20 ಯೋಧರು ಹುತಾತ್ಮ: ಭಾರತೀಯ ಸೇನೆ ಪ್ರತಿದಾಳಿಗೆ 43 ಚೀನಾ ಯೋಧರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಯಲ್ಲಿ 20 ಯೋಧರು ಹುತಾತ್ಮ: ಭಾರತೀಯ ಸೇನೆ ಪ್ರತಿದಾಳಿಗೆ 43 ಚೀನಾ ಯೋಧರು ಸಾವು

ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆದಿದ್ದು, 20 ಭಾರತೀಯ ಯೋಧರ ಹತ್ಯೆ ಮಾಡಲಾಗಿದೆ.

ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆಸಿದ್ದು 43 ಚೀನಾ ಯೋಧರು ಸಾವನ್ನಪ್ಪಿದ್ದಾರೆ. ಗುಂಡಿನ ಚಕಮಕಿ ನಡೆದಿಲ್ಲ. ಕಲ್ಲು, ರಾಡ್, ಬಡಿಗೆಯಿಂದ ಭಾರತದ ಸೈನಿಕರನ್ನು ಕೊಲೆ ಮಾಡಲಾಗಿದ್ದು, ಉಭಯ ದೇಶಗಳ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ.

ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ಏರ್ಪಟ್ಟು ಎರಡು ದೇಶಗಳ ಯೋಧರು ಸಾವಿಗೀಡಾದ ಘಟನೆ ಕುರಿತಂತೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು ಎರಡು ದೇಶಗಳು ತಾಳ್ಮೆ ವಹಿಸಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...