alex Certify ಮುಳ್ಳುಹಂದಿಯೊಂದಿಗೆ ಚಿರತೆ ಫೈಟ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಳ್ಳುಹಂದಿಯೊಂದಿಗೆ ಚಿರತೆ ಫೈಟ್; ವಿಡಿಯೋ ವೈರಲ್

ಕಾಡಿನಲ್ಲಿ ಹೋರಾಟದ‌ ಜೀವನ. ಕೆಲವೊಮ್ಮೆ ಕಾಡುಪ್ರಾಣಿಗಳು ಹೊಡೆದಾಡುವ ಕ್ಷಣ ನೋಡುವುದಕ್ಕೆ ಮೈ ರೋಮಾಂಚನದ ಅನುಭವ ನೀಡುತ್ತದೆ. ಇದೇ ರೀತಿಯ ವಿಡಿಯೊ ಇದೀಗ ವೈರಲ್ ಆಗಿದೆ.

ಐಎಫ್ಎಸ್ ಅಧಿಕಾರಿ ಜಗನ್ ಸಿಂಗ್, ಚಿರತೆ ಹಾಗೂ ಮುಳ್ಳುಹಂದಿ ಜಗಳವಾಡುತ್ತಿರುವ ವಿಡಿಯೋ ಹಾಕಿದ್ದಾರೆ. 25 ಸೆಕೆಂಡ್‌ನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಮುಳ್ಳುಹಂದಿಯನ್ನು ನೋಡಿದ ಚಿರತೆ ಅದರ ಮೇಲೆ ದಾಳಿ ಮಾಡಲು ಮುಂದಾಯಿತು. ಆದರೆ ಸೋಲನ್ನು ಒಪ್ಪಿಕೊಳ್ಳದ ಮುಳ್ಳುಹಂದಿ, ಪ್ರತಿದಾಳಿ ನಡೆಸಲು‌ ಮುಂದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಚಿರತೆ ಕಚ್ಚಲು ಮುಂದಾಗಿದೆ. ಆದರೆ ಈ ಹೋರಾಟದ ಅಂತ್ಯ ಏನಾಯಿತು ಎನ್ನುವುದು ನಿಗೂಢವಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬೆಚ್ಚಿಬೀಳುವುದರೊಂದಿಗೆ ಪ್ರಕೃತಿಯ ಈ ಹೋರಾಟದ ಜೀವನವನ್ನು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...