alex Certify ಖಾಸಗಿ ಬ್ಯಾಂಕುಗಳ ‘ಹಣಕಾಸು’ ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಬ್ಯಾಂಕುಗಳ ‘ಹಣಕಾಸು’ ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಖಾಸಗಿ ಬ್ಯಾಂಕುಗಳ ಹಣಕಾಸು ವರ್ಗಾವಣೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ವಿಷಯವನ್ನು ತಿಳಿಸಿದ್ದಾರೆ.

ಸರ್ಕಾರಿ ಸಂಬಂಧಿತ ಬ್ಯಾಂಕಿಂಗ್ ವರ್ಗಾವಣೆಗಳನ್ನು ನಡೆಸಲು ಈಗ ಎಲ್ಲ ಖಾಸಗಿ ಬ್ಯಾಂಕ್ ಗಳಿಗೆ ಅನುಮತಿ ನೀಡಲಾಗಿದ್ದು, ಹೀಗಾಗಿ ತೆರಿಗೆ ಮತ್ತು ಪಿಂಚಣಿ ಸಂಬಂಧಿತ ಹಣಕಾಸು ವರ್ಗಾವಣೆಗಳನ್ನು ಮುಂದೆ ಖಾಸಗಿ ಬ್ಯಾಂಕುಗಳು ಸಹ ನಿರ್ವಹಿಸಬಹುದಾಗಿದೆ.

ಕುಟುಂಬದ ರಕ್ಷಣೆಗಾಗಿ ಚಿರತೆಯೊಂದಿಗೆ ಸೆಣಸಾಡಿದ್ದ ಸಾಹಸಿ: ಕೆಪಿಸಿಸಿ ಅಧ್ಯಕ್ಷರಿಂದ ನಗದು ಕಾಣಿಕೆ

ಈವರೆಗೆ ಸರ್ಕಾರಿ ಸಂಬಂಧಿತ ಬ್ಯಾಂಕಿಂಗ್ ವರ್ಗಾವಣೆಗಳನ್ನು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಬ್ಯಾಂಕುಗಳು ಹಾಗೂ ಕೆಲವು ಖಾಸಗಿ ಬ್ಯಾಂಕುಗಳು ಮಾತ್ರ ನಿರ್ವಹಿಸುತ್ತಿದ್ದು, ಇನ್ನು ಮುಂದೆ ಎಲ್ಲ ಖಾಸಗಿ ಬ್ಯಾಂಕುಗಳಿಗೆ ಅವಕಾಶ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...