alex Certify ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ನಲ್ಲಿ ತಮಿಳುನಾಡು – ಕೇರಳ ಲೀಸ್ಟ್ : ಕರ್ನಾಟಕ – ಆಂಧ್ರವೇ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ನಲ್ಲಿ ತಮಿಳುನಾಡು – ಕೇರಳ ಲೀಸ್ಟ್ : ಕರ್ನಾಟಕ – ಆಂಧ್ರವೇ ಬೆಸ್ಟ್

ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಭರದಿಂದ ಸಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲಾಗ್ತಿದೆ. ಇನ್ನೂ ಈ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​​ನಲ್ಲಿ ಕೇರಳ ಹಾಗೂ ತಮಿಳುನಾಡು ಶೇಕಡಾ 25ರಷ್ಟು ಕಡಿಮೆ ಅಂಕಿ ಅಂಶವನ್ನ ದಾಖಲಿಸುವ ಕಳಪೆ ಪ್ರದರ್ಶನ ತೋರಿವೆ ಎಂದು ವರದಿಯಾಗಿದೆ.

ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಸಂಬಂಧ ಪ್ರತಿನಿತ್ಯ ನಡೆಯುವ ವಿಡಿಯೋ ಕಾನ್ಫರೆನ್ಸ್​ ಸಭೆಯಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಬಗ್ಗೆ ಅಲ್ಲಿನ ಆರೋಗ್ಯ ಸಿಬ್ಬಂದಿ ಹಿಂಜರಿಕೆ ಹೊಂದಿದ್ದಾರೆ ಎಂದು ಅಧಿಕಾರಿಗಳು ವ್ಯಾಕ್ಸಿನೇಷನ್​ ಡ್ರೈವ್​ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ತಮಿಳುನಾಡು ಹಾಗೂ ಕೇರಳದ ಜೊತೆಯಲ್ಲಿ ಪಂಜಾಬ್​ ಹಾಗೂ ಚತ್ತೀಸಗಢ ಕೂಡ ಲಸಿಕೆ ವಿತರಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 70 ಪ್ರತಿಶತ ಲಸಿಕೆ ಕವರೇಜ್​ ಮಾಡುವ ಮೂಲಕ ಉತ್ತಮ ಪ್ರದರ್ಶನ ತೋರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...