alex Certify ಶಾಕಿಂಗ್: ಹಾಡಹಗಲೇ ನಡೆದ ಕೊಲೆ‌ -‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಹಾಡಹಗಲೇ ನಡೆದ ಕೊಲೆ‌ -‌ ವಿಡಿಯೋ ವೈರಲ್

ಹಾಡಹಗಲೇ 50 ವರ್ಷದ ವ್ಯಕ್ತಿಯೊಬ್ಬರನ್ನು ಪಾಯಿಂಟ್‌ ಬ್ಲಾಂಕ್‌ನಲ್ಲಿ ಶೂಟ್ ಮಾಡಿದ ಘಟನೆ ದೆಹಲಿಯಲ್ಲಿ ಜರುಗಿದೆ.

ಉತ್ತರ ದೆಹಲಿಯ ಜದ್ರಾಬಾದ್‌ನಲ್ಲಿ ತನ್ನ ಮನೆಯ ಹೊರಗೆ ನಿಂತಿದ್ದ ರಯೀಸ್ ಅನ್ಸಾರಿ ಹೆಸರಿನ ಈ ವ್ಯಕ್ತಿಯತ್ತ ಬಂದ ಮುಸುಕುಧಾರಿ ಕೊಲೆಗಡುಕರು ಹತ್ಯೆಗೈದು ಪರಾರಿಯಾಗಿದ್ದಾರೆ. ಇಡಿ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಮ್ಮ ಮನೆಯ ಬಳಿ ದಿನಸಿ ಅಂಗಡಿಯೊಂದನ್ನು ನಡೆಸುವ ಅನ್ಸಾರಿ ತಮ್ಮ ಸ್ಕೂಟರ್‌ ಒರೆಸುತ್ತಿದ್ದ ವೇಳೆ ಅವರೊಂದಿಗೆ ಸಂವಹನ ನಡೆಸಲು ಬಂದ ಕೊಲೆಗಾರರು ನೋಡನೋಡುತ್ತಲೇ ಗನ್ ಹೊರತೆಗೆದು ಅವರ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. ಅನ್ಸಾರಿ ಪ್ರತಿರೊಧ ಒಡ್ಡಲು ನೋಡಿದರೂ ಸಹ ಅವರ ಹಿಂದೆ ಬೆನ್ನಟ್ಟಿ ಹೋಗಿದ್ದಾರೆ ಕೊಲೆಗಾರರು.

ಅನ್ಸಾರಿರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿತ್ತು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಜರುಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಾಡಹಗಲೇ ಕೊಲೆ ಮಾಡುವ ಅನೇಕ ಘಟನೆಗಳು ದೆಹಲಿಯಲ್ಲಿ ಇತ್ತೀಚೆಗೆ ಹೆಚ್ಚಾಗಿಬಿಟ್ಟಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...