alex Certify BIG NEWS: ರಹಸ್ಯ ಕಾರ್ಯಾಚರಣೆಯಲ್ಲಿ ʼಕೋವಿಡ್ -‌ 19ʼ ರಿಪೋರ್ಟ್‌ ಕುರಿತ ಆಘಾತಕಾರಿ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಹಸ್ಯ ಕಾರ್ಯಾಚರಣೆಯಲ್ಲಿ ʼಕೋವಿಡ್ -‌ 19ʼ ರಿಪೋರ್ಟ್‌ ಕುರಿತ ಆಘಾತಕಾರಿ ಸಂಗತಿ ಬಹಿರಂಗ

ಮೀರತ್: ಇದು ಅಕ್ಷಮ್ಯ ಅಪರಾಧ. ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು, ವೈದ್ಯರು, ನರ್ಸ್ ಗಳು, ಪೊಲೀಸರು, ಯೋಧರು ಸೇರಿದಂತೆ ಇನ್ನೂ ಹಲವರು ಕೊರೋನಾ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸುಳ್ಳು ವರದಿಯ ಪ್ರಮಾಣ ಪತ್ರ ಕೊಡುತ್ತಿರುವ ಈ ಆಸ್ಪತ್ರೆಯ ಕಾರ್ಯವೈಖರಿ ಈಗ ಭಾರಿ ವಿವಾದಕ್ಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಮೀರತ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದರೂ ಸಹ ನೆಗೆಟಿವ್ ಬಂದಿದೆ ಎಂದು ವರದಿ ನೀಡಿ, ಪ್ರಮಾಣ ಪತ್ರ ಕೊಡಲಾಗುತ್ತಿದೆ. ಆ ಮೂಲಕ ಸೋಂಕಿತರನ್ನು ಸ್ವಚ್ಛಂದವಾಗಿ ಹೊರಗೆ ಹೋಗಲು ಬಿಟ್ಟು ರೋಗ ಉಲ್ಬಣಕ್ಕೆ ಕಾರಣವಾಗಿದೆ.

ಈ ಆಸ್ಪತ್ರೆಗೆ ಕೋವಿಡ್ ಟೆಸ್ಟ್ ಗೆ ಎಂದು ಬರುವವರು ವರದಿ ಬರುವ ಮುನ್ನವೇ ತಮಗೆ ನೆಗೆಟಿವ್ ಬಂದಿದೆ ಎಂದು ವರದಿ ನೀಡುವಂತೆ ಆ ಆಸ್ಪತ್ರೆಯ ವ್ಯವಸ್ಥಾಪಕನಿಗೆ 2 ಸಾವಿರ ರೂಪಾಯಿ ಲಂಚ ಕೊಡುತ್ತಿರುವ ವಿಡಿಯೋವನ್ನು ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದೆ. ವರದಿಯನ್ನು ನೆಗೆಟಿವ್ ಎಂದು ಕೊಟ್ಟ ಮೇಲೆ ಬಾಕಿ 500 ರೂಪಾಯಿ ಕೊಡುವುದಾಗಿ ರೋಗಿ ಹೇಳುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಆಸ್ಪತ್ರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಪರವಾನಗಿ ರದ್ದುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...