alex Certify ಮಾಸ್ಕ್‌ ಆಗಿ ಬಳಕೆಯಾಯ್ತು 10 ರೂಪಾಯಿ ನೋಟು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್‌ ಆಗಿ ಬಳಕೆಯಾಯ್ತು 10 ರೂಪಾಯಿ ನೋಟು…!

ಇಲ್ಲೊಬ್ಬ ಯುವಕ ಲಾಕ್ ಡೌನ್ ಇದ್ದರೂ ಅತ್ತಂದಿತ್ತ ಅಡ್ಡಾಡುತ್ತಿದ್ದ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ. ಗ್ರಹಚಾರಕ್ಕೆ ಮಾಸ್ಕ್ ಬೇರೆ ಹಾಕಿಕೊಂಡಿರಲಿಲ್ಲ. ಇವನು ಪೊಲೀಸರು ಕಂಡ ತಕ್ಷಣ ಮಾಸ್ಕ್ ಆಗಿ ಉಪಯೋಗಿಸಿದ ವಸ್ತು ಲೆಕ್ಕಕ್ಕೆ ಬರಲಿಲ್ಲ, ಹಾಗಾದರೆ ಕೊನೆಗೆ ಏನಾಯಿತು ಗೊತ್ತಾ…?

ಪೊಲೀಸರು ಹತ್ತಿರ ಬರುವಷ್ಟರಲ್ಲಿ 10 ರೂಪಾಯಿ ನೋಟನ್ನು ಬಾಯಿಯ ಮೇಲಿಟ್ಟುಕೊಂಡು ಬಂದ. ಕಾರಣ ಕೇಳಿದಾಗ ಇಲ್ಲಿ ಈಗ ಒಂದು ಮಾಸ್ಕ್ ಕೊಳ್ಳಬೇಕೆಂದರೆ ತಲಾ 40 ರೂಪಾಯಿ ಕೊಡಬೇಕು. ಆದರೆ, ನನ್ನ ಬಳಿ ಅಷ್ಟೊಂದು ಕಾಸು ಇರಲಿಲ್ಲ. ಹಾಗಾಗಿ ಇದ್ದ 10 ರೂ. ನೋಟನ್ನೇ ನಾನು ಮಾಸ್ಕ್ ರೂಪದಲ್ಲಿ ಬಳಸಿದೆ ಎಂದು ಆತ ಹೇಳಿಕೊಂಡಿದ್ದಾನೆ.

ಅಂದಹಾಗೆ ಈತನ ಹೆಸರು ಅಮಿತ್, ಇವನ ಜೊತೆಗೆ ಮೆಹಬೂಬ್ ಎಂಬ ಸ್ನೇಹಿತ ಸಹ ಇದ್ದ. ಆದರೆ, ಪೊಲೀಸರು ಕಂಡೊಡನೆ ಆತ ಸರಸರನೆ ತನ್ನ ಕರ್ಚೀಫ್ ಅನ್ನೇ ಮಾಸ್ಕ್ ಮಾದರಿ ಬಳಸಿದ್ದಾನೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಬ್ಬರ ಮೇಲೂ ಎಫ್ಐಆರ್ ದಾಖಲು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...