ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮೇ 17ರ ನಂತ್ರ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ವಿಮಾನ ಹಾರಾಟ ಮಾರ್ಚ್ 25ರಿಂದ ಬಂದ್ ಆಗಿದ್ದು ಎಂದಿನಿಂದ ಮತ್ತೆ ಸೇವೆ ಶುರುವಾಗಲಿದೆ ಎಂಬ ಬಗ್ಗೆ ಗೊಂದಲವಿದೆ. ಲಾಕ್ ಡೌನ್ ಮುಗಿದು ವಿಮಾನ ಹಾರಾಟ ಶುರುವಾಗ್ತಿದ್ದಂತೆ ವಿಮಾನ ಸಿಬ್ಬಂದಿ ಡ್ರೆಸ್ ಬದಲಾಗಲಿದೆ.
ವಿಮಾನ ಚಾಲಕ ಸೇರಿದಂತೆ ಸಿಬ್ಬಂದಿಗೆ ಪಿಪಿಇ ಕಿಟ್ ಕಡ್ಡಾಯವಾಗಲಿದೆ. ಪ್ರಯಾಣದ ಸಮಯದಲ್ಲಿ ಸಿಬ್ಬಂದಿ ಪ್ರಯಾಣಿಕರೊಂದಿಗೆ ನಿಕಟ ಸಂಪರ್ಕಕ್ಕೆ ಬರುವುದ್ರಿಂದ ಅವ್ರಿಗೆ ಸೋಂಕು ತಗಲುವ ಸಾಧ್ಯತೆಯಿರುತ್ತದೆ. ಸಿಬ್ಬಂದಿ ರಕ್ಷತೆಗಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಇಂಡಿಗೊ, ಏರ್ ಇಂಡಿಯಾ, ಏರ್ ಏಷ್ಯಾದಂತಹ ವಿಮಾನಯಾನ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿವೆ. ಈಗಾಗಲೇ ಈ ಸಂಸ್ಥೆಗಳು ಉಡುಪು ಹೇಗಿರಬೇಕೆಂದು ನಿರ್ಧಾರ ಕೈಗೊಂಡಿವೆ.