alex Certify ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…!

ಮಾಲೀಕೆಯ ಜೊತೆ ಸೇರಿ ಎಮ್ಮೆಯೊಂದು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ‌

ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಹಿಮಾಚಲ ಪ್ರದೇಶದ ಗ್ರಾಮವೊಂದರಲ್ಲಿ ಸೆರೆ ಹಿಡಿಯಲಾದ ವಿಡಿಯೋ ಇದಾಗಿದ್ದು ನೆಟ್ಟಿಗರಿಂದ ವ್ಯಾಪಕವಾಗಿ ಶೇರ್​ ಆಗ್ತಿದೆ.

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಎಂಬ ಗಾದೆಯೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ಈ ಎಮ್ಮೆ ಈ ಗಾದೆ ಮಾತನ್ನೇ ಸುಳ್ಳು ಮಾಡಿಬಿಟ್ಟಿದೆ.

ವಿಡಿಯೋದಲ್ಲಿ ಮಹಿಳೆ ಹಾಡು ಹೇಳ್ತಾ ಡ್ಯಾನ್ಸ್ ಮಾಡ್ತಾ ಇರ್ತಾಳೆ. ಎಮ್ಮೆ ಬಳಿಯೂ ಡ್ಯಾನ್ಸ್ ಮಾಡು ಎಂದು ಸೂಚನೆ ನೀಡುತ್ತಾಳೆ. ಕೂಡಲೇ ಎಮ್ಮೆ ಕೂಡ ಜೋರಾಗಿ ನೃತ್ಯ ಮಾಡೋಕೆ ಶುರು ಮಾಡುತ್ತೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...