ಮುಂಬೈ ಪೊಲೀಸರು ವಶಪಡಿಸಿಕೊಂಡಿರುವ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಪ್ರಸಿದ್ಧ ಕಾಮಿಡಿಯನ್ ಕಪಿಲ್ ಶರ್ಮಾರನ್ನ ಮುಂಬೈ ಸಿಐಯು ವಿಚಾರಣೆಗೆ ಕರೆದಿದ್ದಾರೆ.
ಮುಂಬೈ ಅಪರಾಧ ಗುಪ್ತಚರ ಘಟಕದ ಎಪಿಐ ಸಚಿನ್ ವಾಜೆ ಕಪಿಲ್ ಶರ್ಮಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಪೊಲೀಸ್ ನೋಟಿಸ್ಗೆ ಪ್ರತಿಕ್ರಿಯಿಸಿದ ಕಾಮಿಡಿಯನ್ ಕಪಿಲ್ ಶರ್ಮಾ ಮುಂಬೈನ ಅಪರಾಧ ವಿಭಾಗದ ಬ್ರ್ಯಾಂಚ್ಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಕಪಿಲ್ ಶರ್ಮಾ ತಾವು ವ್ಯಾನಿಟಿ ವ್ಯಾನ್ಗಾಗಿ ಕಾರ್ ವಿನ್ಯಾಸಕ ದಿಲೀಪ್ ಛಾಬ್ರಿಯಾಗೆ ಹಣ ಪಾವತಿಸಿದ್ದಾಗಿ ಹೇಳಿದ್ದಾರೆ.
ವ್ಯಾನಿಟಿ ಕಾರ್ ಒಂದನ್ನ ಕೊಳ್ಳಬೇಕು ಎಂದು ಕೊಂಡಿದ್ದ ಕಪಿಲ್ ಶರ್ಮಾ ಇದಕ್ಕಾಗಿ ಕಾರು ವಿನ್ಯಾಸಕ ದಿಲೀಪ್ ಛಾಬ್ರಿಯಾಗೆ ಹಣ ಪಾವತಿ ಮಾಡಿದ್ದರಂತೆ. ಆದರೆ ಆತ ಕೆಲಸವನ್ನ ಪೂರ್ಣಗೊಳಿಸದ ಕಾರಣ ದೂರನ್ನ ದಾಖಲಿಸಿದ್ದರು. ಛಾಬ್ರಿಯಾ ವಿರುದ್ಧ ಇದೀಗ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಹೀಗಾಗಿ ಪೊಲೀಸರು ಕಪಿಲ್ ಶರ್ಮಾರನ್ನ ಕಚೇರಿಗೆ ಕರೆಯಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.