alex Certify BIG NEWS:ʼವರದಕ್ಷಿಣೆʼ ಕಿರುಕುಳ ಪ್ರಕರಣಗಳ ಕುರಿತು ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:ʼವರದಕ್ಷಿಣೆʼ ಕಿರುಕುಳ ಪ್ರಕರಣಗಳ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಮಹಿಳಾ ಮಧ್ಯವರ್ತಿಯ ವಿರುದ್ಧ ದಾಖಲು ಮಾಡಲಾಗಿದ್ದ ಕೇಸ್​ನ್ನು ಮುಂಬೈ ಹೈಕೋರ್ಟ್ ರದ್ದು ಪಡಿಸಿದೆ. ಅಪರಿಚಿತರನ್ನ ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಎಫ್​ಐಆರ್​ ರದ್ದುಗೊಳಿಸಿದ ಮುಂಬೈ ಹೈಕೋರ್ಟ್​ನ ಔರಂಗಾಬಾದ್​ ಪೀಠ, ಅಪರಿಚಿತರು ಅಥವಾ ರಕ್ತ ಸಂಬಂಧಿಗಳಲ್ಲದವರನ್ನ ವರದಕ್ಷಿಣೆ ಕಿರುಕುಳ ಆರೋಪ ಅಂದ್ರೆ ಐಪಿಸಿ ಸೆಕ್ಷನ್​ 498 ಎ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿದೆ

ಮಹಿಳೆಯೊಬ್ಬರು ತಮ್ಮ ಪತಿ, ಮಾವ, ಹಾಗೂ ಪತಿಯ ವಿವಾಹಿತ, ಅವಿವಾಹಿತ ಸಹೋದರಿಯರು, ಪತಿಯ ಸಂಬಂಧಿ ಹಾಗೂ ಈ ಮದುವೆಯನ್ನ ಮಾಡಿಸಿದ್ದ ಮದ್ಯವರ್ತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನ ನೀಡಿದ್ದರು.

ಈ ಜೋಡಿ 2018ರಲ್ಲಿ ವಿವಾಹವಾಗಿತ್ತು. ಆಕೆ ಮದುವೆಯಾದ 2 ತಿಂಗಳುಗಳ ಬಳಿಕ, ಆಕೆಯ ಬಳಿ ಪತಿಯ ಕುಟುಂಬಸ್ಥರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು, ಅಲ್ಲದೇ 7 ತಿಂಗಳುಗಳ ಬಳಿಕ ಅಂದರೆ 2019ರಲ್ಲಿ ನನ್ನನ್ನ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಳು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಾಸ್​ ಜಾಧವ್​ ಹಾಗೂ ಮುಕುಂದ್​ ಸೆವ್ಲಿಕರ್​ ನೇತೃತ್ವದದ ಪೀಠ ಐಪಿಸಿ ಸೆಕ್ಷನ್​ 498 ಎ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದೆ. ಹೀಗಾಗಿ ಪತಿ ಹಾಗೂ ಆತನ ಸಹೋದರಿಯರು ಈ ಸೆಕ್ಷನ್​ನಡಿಯಲ್ಲಿ ಯಾವುದೇ ವಿನಾಯಿತಿ ಇರೋದಿಲ್ಲ ಎಂದು ಹೇಳಿದೆ. ಆದರೆ ಈ ಸೆಕ್ಷನ್​ನ ಅಡಿಯಲ್ಲಿ ಸಂಬಂಧಿಕರಲ್ಲದವರನ್ನ ಸೇರಿಸೋಕೆ ಸಾಧ್ಯವಿಲ್ಲ ಎಂದು ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...