‘ಬಜೆಟ್’ ಮಂಡನೆ ವೇಳೆ ನೀರಿನ ಬದಲು ಸ್ಯಾನಿಟೈಸರ್ ಕುಡಿದ ಅಧಿಕಾರಿ…! 03-02-2021 5:45PM IST / No Comments / Posted In: Latest News, India ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ನ ಉಪ ಕಮಿಷನರ್ ರಮೇಶ್ ಪವಾರ್, ಕುಡಿಯುವ ನೀರು ಎಂದುಕೊಂಡು ತಪ್ಪಾಗಿ ಸ್ಯಾನಿಟೈಸರ್ ಕುಡಿದಿದ್ದಾರೆ. ಸಿವಿಕ್ ಬಾಡಿಯ ಶಿಕ್ಷಣ ಬಜೆಟ್ ಮಂಡಿಸುವ ವೇಳೆ ಈ ಘಟನೆ ಸಂಭವಿಸಿದೆ. ಕುಡಿಯುವ ನೀರಿನ ಬಾಟಲಿಯ ಪಕ್ಕದಲ್ಲೇ ಸ್ಯಾನಿಟೈಸರ್ ಬಾಟಲಿಯನ್ನೂ ಇಡಲಾಗಿತ್ತು. ಹೀಗಾಗಿ ರಮೇಶ್ ಪವಾರ್ ಈ ಯಡವಟ್ಟನ್ನ ಮಾಡಿಕೊಂಡಿದ್ದಾರೆ. ಬಜೆಟ್ ಮಂಡಿಸೋದಕ್ಕೂ ಮುನ್ನ ರಮೇಶ್ ನೀರನ್ನ ಕುಡಿಯೋಕೆ ನಿರ್ಧರಿಸಿದ್ದಾರೆ. ಹೀಗಾಗಿ ನೀರಿನ ಬಾಟಲಿಯನ್ನ ಎತ್ತಿಕೊಳ್ಳುವ ಜಾಗದಲ್ಲಿ ತಪ್ಪಾಗಿ ಸ್ಯಾನಿಟೈಸರ್ ಬಾಟಲಿ ಎತ್ತಿದ್ದಾರೆ. ಸ್ಯಾನಿಟೈಸರ್ ಎಂದು ಗೊತ್ತಾಗುತ್ತಿದ್ದಂತೆಯೇ ಅದನ್ನ ಹೊರಕ್ಕುಗುಳಿದ್ದಾರೆ. ಈ ಘಟನೆ ಬಳಿಕ ಸಣ್ಣ ವಿರಾಮ ತೆಗೆದುಕೊಂಡ ರಮೇಶ್ ಬಳಿಕ ತಮ್ಮ ಸ್ಥಾನಕ್ಕೆ ವಾಪಸ್ಸಾಗಿದ್ದಾರೆ. ಹಾಗೂ ಬಜೆಟ್ ಮಂಡನೆ ಮುಂದುವರಿಸಿದ್ದಾರೆ. ರಮೇಶ್ ಆರೋಗ್ಯದಲ್ಲಿ ಯಾವುದೇ ಏರುಪೇರು ಸಂಭವಿಸಿಲ್ಲ. #WATCH: BMC Joint Municipal Commissioner Ramesh Pawar accidentally drinks from a bottle of hand sanitiser, instead of a bottle of water, during the presentation of Budget in Mumbai. pic.twitter.com/MuUfpu8wGT — ANI (@ANI) February 3, 2021