alex Certify ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು..! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು..! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!

ಕಲ್ಯಾಣ ಮಂಟಪದಲ್ಲಿ ವರನ ಮುಖ ನೋಡುತ್ತಿದ್ದಂತೆಯೇ ವಧು ಮದುವೆಗೆ ನಿರಾಕರಿಸಿದ ವಿಚಿತ್ರ ಘಟನೆ ಬಿಹಾರದ ಪಶ್ಚಿಮ ಚಂಪರಣ್​ ಜಿಲ್ಲೆಯಲ್ಲಿ ನಡೆದಿದೆ. ವಾಟ್ಸಾಪ್​​ನಲ್ಲಿ ನೋಡಿದ ಫೋಟೋಗೂ ಈ ಹುಡುಗನ ಮುಖಕ್ಕೂ ಹೋಲಿಕೆಯೇ ಇಲ್ಲ ಎಂದು ವಧು ಆರೋಪಿಸಿದ್ದಾಳೆ.

ವಧು ಮದುವೆಗೆ ನಿರಾಕರಿಸುತ್ತಿದ್ದಂತೆಯೇ ವಿವಾಹ ಕಾರ್ಯಕ್ರಮದಲ್ಲಿ ನೆರೆದಿದ್ದ ಅನೇಕರು ಆಕೆಯ ಬಳಿ ಸಂಧಾನಕ್ಕೆ ಯತ್ನಿಸಿದ್ರು. ಆದರೆ ವಧು ವಾಟ್ಸಾಪ್​ನಲ್ಲಿ ತಾನು ನೋಡಿದ ಫೋಟೋವನ್ನ ಎಲ್ಲರಿಗೂ ತೋರಿಸಿ ಕಲ್ಯಾಣ ಮಂಪಟದಿಂದ ಹೊರ ನಡೆದಿದ್ದಾಳೆ.

ಈ ಘಟನೆಯು ಬೆಟ್ಟಯ್ಯ ಎಂಬ ಪ್ರದೇಶ ಶಂಖಿಯಾ ಮೇ ಏರಿಯಾದಲ್ಲಿ ನಡೆದಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ವರನ ತಂದೆ ಅನಿಲ್​ ಕುಮಾರ್​ ಚೌಧರಿ ನಾವು ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಕುಟುಂಬಸ್ಥರನ್ನ ಅತಿಥಿಗಳನ್ನ ಮದುವೆಗೆ ಆಹ್ವಾನಿಸಿದ್ದೆವು. ಆದರೆ ವಧುವಿನ ಅಕ್ಕ ವಧುವನ್ನ ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ.

ಸ್ಥಳೀಯ ನಿವಾಸಿಗಳ ಮಧ್ಯ ಪ್ರವೇಶದ ಬಳಿಕ ವರನ ಕಡೆಯವರು ಒತ್ತಾಯಪೂರ್ವಕವಾಗಿ ಕಲ್ಯಾಣ ಮಂಟಪದಿಂದ ತಮ್ಮ ಗ್ರಾಮಕ್ಕೆ ತೆರಳಬೇಕಾಯ್ತು. ವಧು ಹಾಗೂ ವರನ ಕುಟುಂಬ ಬೈರಿಯಾ ಪೊಲೀಸ್​ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಆದರೆ ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...