alex Certify ಕ್ವಾರಂಟೈನ್ ನಲ್ಲಿದ್ದ ವಲಸೆ ಕಾರ್ಮಿಕರು, ಗ್ರಾಮದ ಯುವಕರಿಂದ ಪೈಶಾಚಿಕ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ನಲ್ಲಿದ್ದ ವಲಸೆ ಕಾರ್ಮಿಕರು, ಗ್ರಾಮದ ಯುವಕರಿಂದ ಪೈಶಾಚಿಕ ಕೃತ್ಯ

ಪಾಟ್ನಾ: ಯುವತಿ ಮೇಲೆ ಇಬ್ಬರು ವಲಸೆ ಕಾರ್ಮಿಕರು ಸೇರಿ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಲೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದೆ.

ದಾವತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಚಂಚಲ್ ಮತ್ತು ಸುರೇಶ್ ಬಂಧಿತ ಆರೋಪಿಗಳು. ಇವರಿಬ್ಬರು ವಲಸೆ ಕಾರ್ಮಿಕರಾಗಿದ್ದು ಕ್ವಾರಂಟೈನ್ ಸೆಂಟರ್ ನಲ್ಲಿದ್ದರು. ಇವರೊಂದಿಗೆ ಇನ್ನೂ ನಾಲ್ವರು ಸೇರಿ 18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಬುಧವಾರ ರಾತ್ರಿ 9.30 ರ ಸುಮಾರಿಗೆ ಯುವತಿ ಮನೆಯಿಂದ ಹೊರಗೆ ಶೌಚಾಲಯಕ್ಕೆ ತೋಟದ ಬಳಿ ತೆರಳಿದ್ದ ವೇಳೆ ಆಕೆಯ ಬಳಿ ಬಂದ ಇಬ್ಬರು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಗ್ರಾಮದಲ್ಲಿದ್ದ ತಮ್ಮ ಸ್ನೇಹಿತರನ್ನು ಫೋನ್ ಮಾಡಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ.

ಮಾಹಿತಿ ತಿಳಿದ ಯುವತಿ ಕುಟುಂಬದವರು ಕ್ವಾರಂಟೈನ್ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಸತ್ಯವೀರ್ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...