alex Certify ಮುಂದಿನ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎಂದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎಂದ ಅಭಿಮಾನಿಗಳು

ತೀವ್ರ ಕುತೂಹಲ ಸೃಷ್ಟಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯನ್ನ ಗೆಲ್ಲುವ ಮೂಲಕ ನಿತೀಶ್​ ಕುಮಾರ್​ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಿದ್ಧವಾಗಿದ್ದಾರೆ.

125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್​ಡಿಎ ಬಿಹಾರ ಗೆಲುವಿನ ಚುಕ್ಕಾಣಿಯನ್ನ ತನ್ನದಾಗಿಸಿಕೊಂಡಿದೆ. ಆದರೆ ಪಕ್ಷಗಳ ನಡುವಿನ ಮತಗಳನ್ನ ನೋಡೋದಾದ್ರೆ ಆರ್​​ಜೆಡಿ 75 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ 74 ಸ್ಥಾನಗಳನ್ನ ಗೆದ್ರೆ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಕೇವಲ 43 ಸ್ಥಾನಗಳಲ್ಲಿ ವಿಜಯದ ನಗೆ ಬೀರಿದೆ. ಇತ್ತ ಕಾಂಗ್ರೆಸ್​ 19 ಕ್ಷೇತ್ರಗಳನ್ನ ತನ್ನದಾಗಿಸಿ ಕೊಂಡಿದೆ.

ಎನ್ಡಿಎಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವನ್ನ ಸಂಪಾದಿಸುತ್ತಿದ್ದಂತೆಯೇ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು. ಬಿಹಾರಿ ಭಾಷೆಯಲ್ಲೇ ನಿತಿನ್​ ಕುಮಾರ್​ಗೆ ಶುಭಕೋರಿದ ಸಾಕಷ್ಟು ಪೋಸ್ಟರ್​ಗಳು ಪಾಟ್ನಾದಾದ್ಯಂತ ಹಾರಾಡುತ್ತಿವೆ.

— ANI (@ANI) November 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...