alex Certify ಬಿಗ್ ನ್ಯೂಸ್: ಕೃಷಿ ಸಾಲ ಮನ್ನಾ, ರೈತರ ಆದಾಯ ಹೆಚ್ಚಳ -10 ಲಕ್ಷ ಉದ್ಯೋಗದ ಭರವಸೆ ನೀಡಿದ RJD | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಕೃಷಿ ಸಾಲ ಮನ್ನಾ, ರೈತರ ಆದಾಯ ಹೆಚ್ಚಳ -10 ಲಕ್ಷ ಉದ್ಯೋಗದ ಭರವಸೆ ನೀಡಿದ RJD

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿದ್ದು ಮತದಾರರನ್ನು ಒಲಿಸಿಕೊಳ್ಳಲು ನಾನಾ ಭರವಸೆಗಳನ್ನು ರಾಜಕೀಯ ಪಕ್ಷಗಳು ನೀಡತೊಡಗಿವೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಲಾಗಿದೆ. ಜೆಡಿಯು -ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿರುವ ಆರ್.ಜೆ.ಡಿ. ಕೃಷಿ ಸಾಲ ಮನ್ನಾ ಮತ್ತು 10 ಲಕ್ಷ ಉದ್ಯೋಗದ ಭರವಸೆ ನೀಡಿದೆ.

2020 ರ ವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮನ್ನಾ ಮಾಡಲಾಗುವುದು ಎಂದು ಆರ್.ಜೆ.ಡಿ. ಪ್ರಣಾಳಿಕೆಯಲ್ಲಿ ಘೋಷಿಸಿದೆ. ರೈತರ ಆದಾಯ ಹೆಚ್ಚಳ, ಧಾನ್ಯಗಳಿಗೆ ಬೆಂಬಲ ಬೆಲೆ, ಶಿಕ್ಷಕರ ನೇಮಕಾತಿ, ಉದ್ದಿಮೆಗಳ ಸ್ಥಾಪನೆ, ಬಂಡವಾಳ ಆಕರ್ಷಣೆ, ಉಚಿತ ಕಂಪ್ಯೂಟರ್ ತರಬೇತಿ ಮೊದಲಾದ ಭರವಸೆಗಳನ್ನು ಆರ್.ಜೆ.ಡಿ. ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...