alex Certify ದೀದಿಗೆ ಬಿಗ್‌ ಶಾಕ್:‌ ಸಿಬಿಐನಿಂದ ಪಶ್ಚಿಮ ಬಂಗಾಳ ಸಚಿವ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀದಿಗೆ ಬಿಗ್‌ ಶಾಕ್:‌ ಸಿಬಿಐನಿಂದ ಪಶ್ಚಿಮ ಬಂಗಾಳ ಸಚಿವ ಅರೆಸ್ಟ್

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಮಂತ್ರಿ ಫಿರ್ಹಾದ್​ ಹಕೀಮ್​​ರನ್ನ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ. ನಾರದಾ ಸ್ಟಿಂಗ್​ ಪ್ರಕರಣ ಸಂಬಂಧ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಪಿರ್ಹಾದ್​ ಹಕೀಮ್​ರನ್ನ ಕರೆದೊಯ್ದಿದೆ ಎನ್ನಲಾಗಿದೆ.

ವಿಚಾರಣೆಗಾಗಿ ಫಿರ್ಹಾದ್​ರ ನಿವಾಸಕ್ಕೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳು ಬಳಿಕ ಅವರನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಸರಿಯಾದ ವಿಚಾರಣೆ ನಡೆಸದೆ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಶ್​ ಧನಖಡ್​ ಪ್ರಕರಣದ ಸಂಬಂಧ ಫಿರ್ಹಾದ್​ ಹಕೀಮ್​ ಸೇರಿದಂತೆ ಸಚಿವ ಸುಬ್ರಾತಾ ಮುಖರ್ಜಿ ಹಾಗೂ ಮಾಜಿ ಸಚಿವ ಮದನ್​ ಖಾನ್​ ಹಾಗೂ ಸೋವನ್​ ಚಟರ್ಜಿ ವಿರುದ್ಧ ಸಿಬಿಐ  ಕಾನೂನು ಕ್ರಮಕ್ಕೆ ಅನುಮತಿ ನೀಡಿದ್ದರು.

ಆದರೆ ಶಾಸಕರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನ ಕೈಗೊಳ್ಳಬೇಕು ಅಂದಲ್ಲಿ ಸ್ಪೀಕರ್​ ಅನುಮತಿಯನ್ನ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಸಿಬಿಐ ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್​ ಅನುಮತಿ ಪಡೆಯುವ ಬದಲು ರಾಜ್ಯಪಾಲರ ಅನುಮತಿ ಆಧರಿಸಿ ಶಾಸಕರ ವಿರುದ್ಧ ಕಾನೂನು ಕ್ರಮಗಳನ್ನ ಕೈಗೊಂಡಿದೆ. ಆದರೆ 2011ರಲ್ಲಿ ಇವರಿಗೆ ನಾನೇ ಪ್ರಮಾಣವಚನ ಬೋಧಿಸಿದ ಕಾರಣ ನನಗೆ ಕಾನೂನು ಕ್ರಮ ಜರುಗಿಸುವಂತೆ ಹೇಳುವ ಅಧಿಕಾರವಿದೆ ಎಂದು ರಾಜ್ಯಪಾಲರು ಸಮರ್ಥನೆ ನೀಡಿದ್ದಾರೆ.

ನಾರದಾ ಲಂಚಾವತಾರ ಟೇಪ್​ 2014ರಲ್ಲಿ ರಿಲೀಸ್​ ಆಗಿದ್ದ ವೇಳೆ ಆಗಿನ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಇವರೆಲ್ಲ ಸಚಿವರಾಗಿದ್ದರು. ನಾರದಾ ನ್ಯೂಸ್​ ಪೋರ್ಟಲ್​ ನಡೆಸಿದ ಸ್ಟಿಂಗ್​ ಆಪರೇಷನ್​ನಲ್ಲಿ ಟಿಎಂಸಿ ನಾಯಕರ ಲಂಚಾವತಾರ ಬೆಳಕಿಗೆ ಬಂದಿತ್ತು.

ದೆಹಲಿ ಮೂಲದ ಕೊಲ್ಕತ್ತಾ ಪತ್ರಕರ್ತ ಸ್ಯಾಮ್ಯೂವಲ್​ ಎಂಬವರು ಉದ್ಯಮಿ ರೂಪದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ್ದರು. 2016ರಲ್ಲಿ ನಡೆದ ಬಂಗಾಳ ಚುನಾವಣೆ ವೇಳೆಯಲ್ಲಿ ಟಿಎಂಸಿ ಪಕ್ಷದ ನಾಲ್ವರು ಸಚಿವರು, ಓರ್ವ ಶಾಸಕ ಹಾಗೂ ಪೊಲೀಸ್​ ಅಧಿಕಾರಿಲಂಚ ಪಡೆದುಕೊಳ್ಳುವುದು ಬೆಳಕಿಗೆ ಬಂದಿತ್ತು. ಭಾರೀ ವಿವಾದ ಹುಟ್ಟುಹಾಕಿದ್ದ ಈ ಪ್ರಕರಣದ ಹೆಚ್ಚಿನ ತನಿಖೆಯನ್ನ ಸಿಬಿಐಗೆ ವಹಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...