alex Certify ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಸಮಾಜದಲ್ಲಿ ಎಲ್ಲರಿಗೂ ಒಳಿತನ್ನು ಬಳಸುವುದನ್ನು ಸಿಗುವುದು ತೀರಾ ಕಡಿಮೆ. ಸ್ವಾರ್ಥ ಪ್ರಪಂಚದಲ್ಲಿ ಸುತ್ತಮುತ್ತಲಿನವರು ಚೆನ್ನಾಗಿರುವಂತೆ ನೋಡಿಕೊಂಡು,‌ತಮ್ಮ ಕೈಲಾದ ಸಹಾಯ ಮಾಡುವವರು ಇನ್ನೂ ಕಡಿಮೆ.

ಈ ಸಹಾನುಭೂತಿ ಬಗ್ಗೆ ಹೇಳುತ್ತಿರುವುದಕ್ಕೂ ಒಂದು ಕಾರಣವಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದರೆ, ಸಹಾನುಭೂತಿ, ಸಹಾಯ ಮನೋಭಾವದ ಚರ್ಚೆ ಏಕೆ ಎಂದು ತಿಳಿಯುತ್ತದೆ.

ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಾಕಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾಯಾರಿದ ಕೋತಿಯೊಂದಕ್ಕೆ‌ ತಮ್ಮ ಬಳಿಯಿರುವ ಮಿನರಲ್ ‌ವಾಟರ್ ಬಾಟಲಿಯಿಂದ ನೀರು ಉಣಿಸಿದ್ದಾರೆ. ಆರಂಭದಲ್ಲಿ ವ್ಯಕ್ತಿಯ ಬಳಿ ಅಂಜುತ್ತಲೇ ನೀರು ಕುಡಿದ ಕೋತಿ, ಬಳಿಕ ಬಾಯಾರಿಕೆ‌ ಹೋಗುವಷ್ಟು ನೀರು ಕುಡಿದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವ್ಯಕ್ತಿಯ ಕಾರ್ಯಕ್ಕೆ ಶಹಬಾಸ್‌ಗಿರಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...