alex Certify ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ.

ಒಡಿಶಾ ಮೂಲದ ಕೇಂದ್ರ ಸರ್ಕಾರಿ ಉದ್ಯೋಗಿ ಸುಭಾಷ್ ಪಾಂಡಾ ಮೃತಪಟ್ಟವರು. ಅವರ 15 ತಿಂಗಳ ಪುತ್ರಿಯ ತಲೆಯೊಳಗೆ ರಕ್ತ ಸೋರಿಕೆಯಾಗಿದೆ. ಕುತ್ತಿಗೆ, ಕಾಲು ಸೇರಿ ಹಲವೆಡೆ ಗಾಯಗಳಾಗಿವೆ. ಎಸ್.ಎಸ್.ಕೆ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆಯಾದರೂ ಬಲವಾಗಿ ಪೆಟ್ಟುಬಿದ್ದಿರುವ ಕಾರಣ ನಾಜೂಕಾಗಿ ಆರೈಕೆ ಮಾಡಬೇಕಿದ್ದು, ತಾಯಿ ಅಪ್ಸನಾ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ.

ಸುಭಾಷ್ ಅವರು ತಮ್ಮ ಮಗಳ ಜತೆ ಟೆರೇಸ್ ನಲ್ಲಿ ಆಡುತ್ತಿದ್ದಾಗ ಇಬ್ಬರೂ ಆಯತಪ್ಪಿ 40 ಅಡಿ ಕೆಳಗೆ ಬಿದ್ದಿದ್ದರು. ಮಗಳೂ ಗಂಭೀರ ಗಾಯಗೊಂಡಿದ್ದರಿಂದ ಪತ್ನಿ ಅಪ್ಸನಾ ಕೂಡ ಸುಭಾಷ್ ಅವರ ಶ್ರಾದ್ಧ ಕರ್ಮಕ್ಕೆ ತೆರಳಲು ಸಾಧ್ಯವಾಗಿಲ್ಲ.‌ ಹೀಗಾಗಿ ಅವರ 12 ವರ್ಷದ ಮಗ ಸಂಬಂಧಿಕರೊಂದಿಗೆ ತೆರಳಿ ಅಂತಿಮ ವಿಧಿವಿಧಾನಗಳನ್ನು ಮುಗಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...