alex Certify ಮೀನು ಪ್ರಿಯರಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಪ್ರಿಯರಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ…!

ಈಗಾಗಲೇ ದೇಶದ 14 ರಾಜ್ಯಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿದೆ. ಒಂದು ಕಡೆ ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲಾಗ್ತಾ ಇದ್ದರೆ ಇನ್ನೊಂದು ಕಡೆಯಲ್ಲಿ ಚಿಕನ್​ ಹಾಗೂ ಮೊಟ್ಟೆ ಸೇವನೆಯನ್ನ ಬ್ಯಾನ್​ ಮಾಡಲಾಗ್ತಿದೆ.

ಹಕ್ಕಿ ಜ್ವರದ ಕಾರಣದಿಂದಾಗಿ ಮೀನು ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿಕನ್​ ಹಾಗೂ ಮೊಟ್ಟೆಯ ಜಾಗದಲ್ಲಿ ಜನರು ಮಟನ್​ ಹಾಗೂ ಮೀನನ್ನ ಬಳಕೆ ಮಾಡ್ತಿದ್ದಾರೆ. ಮಟನ್​ ಹಾಗೂ ಮೀನನ್ನ ಸೇವಿಸಿದ್ರೆ ಆರೋಗ್ಯಕ್ಕೆ ಏನೂ ಆಗಲ್ಲ ಅನ್ನೋ ನಂಬಿಕೆಯಲ್ಲಿ ಜನರಿದ್ದಾರೆ.

ಆದರೆ 241 ಫಿಶ್​ ಫಾರ್ಮ್​ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. 10 ರಾಜ್ಯಗಳ 241 ಫಿಶ್​ ಫಾರ್ಮ್​ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಮೀನುಗಳ ದೇಹದಲ್ಲಿ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದೆ.

ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಫಿಶ್​ ಫಾರ್ಮ್​ಗಳ ನೀರಿನಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಮಲಿನಕಾರಿ ಅಂಶ ಕಂಡು ಬಂದಿದೆ. ಈ ಭಾಗಗಳಲ್ಲಿ ಮೀನುಗಳಲ್ಲಿ ಸೀಸದ ಅಂಶ ಹೆಚ್ಚಾಗಿ ಕಂಡು ಬಂದಿದೆ. ಬಿಹಾರ ಹಾಗೂ ಒಡಿಶಾಗಳಲ್ಲೂ ಮೀನಿನಲ್ಲಿ ಮಾನವನ ದೇಹಕ್ಕೆ ಅತ್ಯಂತ ಭಯಾನಕ ಎನ್ನಲಾದ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...