alex Certify ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ತಾಯಿಗೆ ಅಸಭ್ಯ ಭಾಷೆಯಲ್ಲಿ ನಿಂದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ತಾಯಿಗೆ ಅಸಭ್ಯ ಭಾಷೆಯಲ್ಲಿ ನಿಂದನೆ

ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರಿಗೆ ವ್ಯಕ್ತಿಯೊಬ್ಬ ಅಸಭ್ಯ ಭಾಷೆ ಬಳಸಿ ನಿಂದಿಸಿದ್ದು, ಇದು ಈಗ ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಬಿಬಿಸಿ ಈ ಕುರಿತು ಕ್ಷಮೆ ಯಾಚಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಲಂಡನ್ ನಲ್ಲಿ ನಡೆದ ‘ಬಿಗ್ ಡಿಬೇಟ್’ ಕಾರ್ಯಕ್ರಮದ ವೇಳೆ ಇಂತಹುದೊಂದು ಘಟನೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಇಂಗ್ಲೆಂಡಿನಲ್ಲಿ ಸಿಖ್ ರ ವಿರುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷ ಕುರಿತು ಚರ್ಚೆ ನಡೆಯುತ್ತಿತ್ತು. ಈ ಚರ್ಚೆ ಒಮ್ಮಿಂದೊಮ್ಮೆಗೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದತ್ತ ತಿರುಗಿದೆ.

ಈ ಸಂದರ್ಭದಲ್ಲಿ ಸಿಮೋನ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬ, ಭಾರತ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಹೆಸರನ್ನು ಪ್ರಸ್ತಾಪಿಸಿ ಅಸಭ್ಯ ಭಾಷೆ ಬಳಸಿದ್ದಾನೆ. ಆಘಾತಕಾರಿ ಸಂಗತಿಯೆಂದರೆ ಬಿಬಿಸಿ ಈ ವೇಳೆ ಕರೆ ಕಟ್ ಮಾಡದೆ ಅದನ್ನು ಯಥಾವತ್ ಪ್ರಸಾರ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...