alex Certify ಅತ್ತಿಗೆಯ ಕಾಮದಾಹಕ್ಕೆ ಬಲಿಯಾದ ಮೈದುನ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ತಿಗೆಯ ಕಾಮದಾಹಕ್ಕೆ ಬಲಿಯಾದ ಮೈದುನ…?

ಉತ್ತರ ಪ್ರದೇಶದ ಪಿಲಿಭಿಟ್ ನಲ್ಲಿ ಯುವಕನೊಬ್ಬನನ್ನು ಆತನ ಹಿರಿಯ ಸಹೋದರನೇ ಕೊಲೆ ಮಾಡಿದ್ದಾನೆ. ಪಿಲಿಭಿಟ್ ಜಿಲ್ಲೆಯ ಬಿಸಾಲ್ ಪುರ್ ಪ್ರದೇಶದಲ್ಲಿ ಘಟನೆ ನಡೆದಿದೆ.

ಪತ್ನಿಯೊಂದಿಗೆ ಸೇರಿ ತಮ್ಮನನ್ನು ಕೊಲೆ ಮಾಡಿದ ಅಣ್ಣ ಪಕ್ಕದ ಮನೆಯವರ ಬಾಗಿಲ ಬಳಿ ಮೃತದೇಹ ಎಸೆದಿದ್ದಾನೆ. 20 ವರ್ಷದ ಯುವಕ ಕೊಲೆಯಾಗಿದ್ದು, 30 ವರ್ಷದ ಹಿರಿಯ ಸಹೋದರ ಮತ್ತು 26 ವರ್ಷದ ಅತ್ತಿಗೆ ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹಿರಿಯ ಸಹೋದರ ಅದೇ ಊರಿನ ಯುವತಿಯನ್ನು ಮದುವೆಯಾಗಿದ್ದು ಮದುವೆಯಾದಾಗಿನಿಂದಲೂ ಅತ್ತಿಗೆ ಮೇಲೆ ಮೈದುನ ಕಣ್ಣು ಹಾಕಿದ್ದ. ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬುದ್ಧಿವಾದ ಹೇಳಿದರೂ ಕೇಳದಿದ್ದಾಗ ಆಕ್ರೋಶಗೊಂಡ ಹಿರಿಯ ಸಹೋದರ ಪತ್ನಿಯೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮೃತನ ತಂದೆ ಹಿರಿಯ ಪುತ್ರ ಮತ್ತು ಸೊಸೆ ವಿರುದ್ಧ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಯ ಹಿಂದೆ ಅಕ್ರಮ ಸಂಬಂಧ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪತ್ನಿಯೊಂದಿಗೆ ಸಹೋದರ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡ ಅಣ್ಣನೇ ಕೊಲೆ ಮಾಡಿದ್ದಾನೆ ಎಂದೆಲ್ಲಾ ಚರ್ಚೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...