alex Certify ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 2 ವರ್ಷದವರೆಗೆ ಸಂಬಳ ನೀಡಲಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 2 ವರ್ಷದವರೆಗೆ ಸಂಬಳ ನೀಡಲಿದೆ ಈ ಕಂಪನಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಕಂಪನಿಗಳು ಕೊರೊನಾ ಸೋಂಕಿತರ ನೆರವಿಗೆ ಬಂದಿವೆ. ಈ ಮಧ್ಯೆ ಬಜಾಜ್ ಆಟೋ ನೌಕರರಿಗೆ ಮಹತ್ವದ ಮಾಹಿತಿ ನೀಡಿದೆ.

ಕೊರೊನಾ ಸೋಂಕಿನಿಂದ ನೌಕರರು ಸಾವನ್ನಪ್ಪಿದ್ರೆ ಅವರ ಮನೆಯವರಿಗೆ 2 ವರ್ಷ ಸಂಬಳ ನೀಡುವುದಾಗಿ ಹೇಳಿದೆ. ಇಷ್ಟೇ ಅಲ್ಲ ಮೃತ ನೌಕರರ ಮಕ್ಕಳ ಶಿಕ್ಷಣದ ವೆಚ್ಚವನ್ನು ಕಂಪನಿ ಭರಿಸಲಿದೆ.

ಕಂಪನಿ ನೀಡುವ ವೈದ್ಯಕೀಯ ವಿಮೆಯನ್ನು ಅವಲಂಬಿತರಿಗೆ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಪುಣೆ ಮೂಲದ ಆಟೋ ಮುಖ್ಯಸ್ಥರು ಹೇಳಿದ್ದಾರೆ. ಲಿಂಕ್ಡ್ ಇನ್ ಪೋಸ್ಟ್ ಪ್ರಕಾರ, 24 ತಿಂಗಳವರೆಗೆ ಪ್ರತಿ ತಿಂಗಳು 2 ಲಕ್ಷ ರೂಪಾಯಿವರೆಗೆ ಸಂಬಳ, ಎರಡು ಮಕ್ಕಳಿಗೆ 12ನೇ ತರಗತಿಯವರೆಗೆ ಶಿಕ್ಷಣಕ್ಕಾಗಿ ತಲಾ 1 ಲಕ್ಷ ರೂಪಾಯಿ ಹಾಗೂ ಪದವಿಗಾಗಿ 5 ಲಕ್ಷ ರೂಪಾಯಿ ನೀಡುವುದಾಗಿ ಕಂಪನಿ ಹೇಳಿದೆ.

ಈ ಸಹಾಯ ನೀತಿ ಏಪ್ರಿಲ್ 1, 2020 ರಿಂದ ಜಾರಿಗೆ ಬರುವ ಎಲ್ಲಾ ಖಾಯಂ ಉದ್ಯೋಗಿಗಳಿಗೆ ಅನ್ವಯಿಸುತ್ತದೆ ಎಂದು ಬಜಾಜ್ ಆಟೋ ಸ್ಪಷ್ಟಪಡಿಸಿದೆ. ಕಳೆದ ವರ್ಷ ಕೊರೊನಾದಿಂದ ಮೃತಪಟ್ಟ ನೌಕರರಿಗೂ ಈ ಸಹಾಯ ನೀಡಲಾಗುವುದು. ನೌಕರರ ಕೊರೊನಾ ಚಿಕಿತ್ಸೆಗೂ ಕಂಪನಿ ನೆರವು ನೀಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...