alex Certify ರಾಜ್ಯಸಭೆಯಲ್ಲಿ ಮೈಕ್ ಕೈಕೊಟ್ಟ ಘಟನೆಗೆ ಮತ್ತೊಂದು ತಿರುವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಸಭೆಯಲ್ಲಿ ಮೈಕ್ ಕೈಕೊಟ್ಟ ಘಟನೆಗೆ ಮತ್ತೊಂದು ತಿರುವು

ಸೆಪ್ಟೆಂಬರ್​ 20ರಂದು ಸಂಸತ್ತಿನ ಮಾನ್ಸೂನ್​ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಆಡಿಯೋ ಫೀಡ್​ ಸಮಸ್ಯೆಯಿಂದಾಗಿ ಸುಮಾರು 20 ನಿಮಿಷಗಳ ಅಧಿವೇಶನಕ್ಕೆ ಅಡ್ಡಿಯಾಗಿತ್ತು ಅಂತಾ ಕೇಂದ್ರ ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ನೀಡಿದೆ.

ಆರ್​​ಟಿಐ ಅರ್ಜಿಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಲೋಕೋಪಯೋಗಿ ಇಲಾಖೆ, 2020ರ ಸಪ್ಟೆಂಬರ್​​ 20ರಂದು ಮಧ್ಯಾಹ್ಯ 1.05ರಿಂದ 1.35ರವರೆಗೆ ಆಡಿಯೋ ಫೀಡ್​ ಸಮಸ್ಯೆ ಉಂಟಾಗಿತ್ತು. ಕೆಲ ಸಂಸದರು ಸಭಾಧ್ಯಕ್ಷರ ಆಸನದಲ್ಲಿದ್ದ ಮೈಕ್​​ಗೆ ಹಾನಿ ಉಂಟು ಮಾಡಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರಿವಂಶ್​​ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡಿದ್ದರು.

ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಮೈಕ್​ ಹೊರತುಪಡಿಸಿ ಬೇರೆ ಯಾವುದೇ ಆಸನದಲ್ಲಿ ಆ ಸಮಯದಲ್ಲಿ ಮೈಕ್ ಆನ್​ ಆಗಿರಲಿಲ್ಲ. ಆದ್ದರಿಂದ ಮೈಕ್​ ಮುರಿದುಹೋದಾಗ ಈ ಸಮಸ್ಯೆ ಉಂಟಾಗಿದೆ. ಇದನ್ನ ಸರಿ ಮಾಡೋಕೆ ಸರಿ ಸುಮಾರು ಅರ್ಧ ಗಂಟೆ ಸಮಯ ಹಿಡಿಯಿತು ಅಂತಾ ಕೇಂದ್ರ ಲೋಕೋಪಯೋಗಿ ಇಲಾಖೆ ಟ್ವಿಟರ್​ನಲ್ಲಿ ಸ್ಪಷ್ಟೀಕರಣ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...