alex Certify ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಹೊಸ ಪ್ಲಾನ್​ಗೆ​ ಕೇಜ್ರಿವಾಲ್ ಗ್ರೀನ್​ ಸಿಗ್ನಲ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಹೊಸ ಪ್ಲಾನ್​ಗೆ​ ಕೇಜ್ರಿವಾಲ್ ಗ್ರೀನ್​ ಸಿಗ್ನಲ್​….!

ದೆಹಲಿಯಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಎಂ ಅರವಿಂದ ಕೇಜ್ರಿವಾಲ್​ ಗುರುವಾರ ಸ್ವಿಚ್​ ದೆಹಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ವಾರಗಳಲ್ಲಿ ಕೇಜ್ರಿವಾಲ್​ ಸರ್ಕಾರ ಎಲೆಕ್ಟ್ರಿಕ್​ ವಾಹನಗಳನ್ನ ಅಗತ್ಯ ಕಾರ್ಯಗಳಿಗೆ ನಿಯೋಜಿಸಲಿದೆ ಎಂದು ಹೇಳಿದ್ರು.

ಅಲ್ಲದೇ ದೈತ್ಯ ಕಂಪನಿ, ಡೆಲಿವರಿ ಚೈನ್ಸ್, ಮಾರುಕಟ್ಟೆ ವ್ಯಾಪಾರಸ್ಥರು, ಮಾಲ್​ ಹಾಗೂ ಸಿನಿಮಾ ಮಂದಿರಗಳಲ್ಲಿ ಎಲೆಕ್ಟ್ರಿಕ್​ ವಾಹನಗಳ ಪ್ರಾಮುಖ್ಯತೆ ಸಾರುವಂತೆ ಹಾಗೂ ಸಮೀಪದಲ್ಲೇ ಚಾರ್ಜಿಂಗ್​ಗೆ ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.

ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್

ಅಲ್ಲದೇ ಯುವಜನತೆ ಕೂಡ ಎಲೆಕ್ಟ್ರಿಕ್​ ಬೈಕ್​ಗಳನ್ನ ಕೊಳ್ಳಿ ಎಂದು ಕರೆ ನೀಡಿದ್ರು. ಸ್ವಿಚ್​ ದೆಹಲಿ ಅಭಿಯಾನದ ಮೂಲಕ ದೆಹಲಿ ಪರಿಸರ ಮಾಲಿನ್ಯವನ್ನ ಕಡಿಮೆ ಮಾಡುವ ಪ್ರಯತ್ನದಲ್ಲಿದೆ.

ಜನರು ತೈಲೋತ್ಪನ್ನಗಳಿಂದ ಓಡುವ ವಾಹನಗಳನ್ನ ಬದಿಗಿಟ್ಟು ಎಲೆಕ್ಟ್ರಾನಿಕ್ ವಾಹನ ಬಳಕೆ ಮಾಡಲಿ ಎಂದು ದೆಹಲಿ ಸರ್ಕಾರ ಈ ಅಭಿಯಾನ ಆರಂಭಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...