ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಎಂ ಅರವಿಂದ ಕೇಜ್ರಿವಾಲ್ ಗುರುವಾರ ಸ್ವಿಚ್ ದೆಹಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ವಾರಗಳಲ್ಲಿ ಕೇಜ್ರಿವಾಲ್ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನ ಅಗತ್ಯ ಕಾರ್ಯಗಳಿಗೆ ನಿಯೋಜಿಸಲಿದೆ ಎಂದು ಹೇಳಿದ್ರು.
ಅಲ್ಲದೇ ದೈತ್ಯ ಕಂಪನಿ, ಡೆಲಿವರಿ ಚೈನ್ಸ್, ಮಾರುಕಟ್ಟೆ ವ್ಯಾಪಾರಸ್ಥರು, ಮಾಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಾಮುಖ್ಯತೆ ಸಾರುವಂತೆ ಹಾಗೂ ಸಮೀಪದಲ್ಲೇ ಚಾರ್ಜಿಂಗ್ಗೆ ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.
ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್
ಅಲ್ಲದೇ ಯುವಜನತೆ ಕೂಡ ಎಲೆಕ್ಟ್ರಿಕ್ ಬೈಕ್ಗಳನ್ನ ಕೊಳ್ಳಿ ಎಂದು ಕರೆ ನೀಡಿದ್ರು. ಸ್ವಿಚ್ ದೆಹಲಿ ಅಭಿಯಾನದ ಮೂಲಕ ದೆಹಲಿ ಪರಿಸರ ಮಾಲಿನ್ಯವನ್ನ ಕಡಿಮೆ ಮಾಡುವ ಪ್ರಯತ್ನದಲ್ಲಿದೆ.
ಜನರು ತೈಲೋತ್ಪನ್ನಗಳಿಂದ ಓಡುವ ವಾಹನಗಳನ್ನ ಬದಿಗಿಟ್ಟು ಎಲೆಕ್ಟ್ರಾನಿಕ್ ವಾಹನ ಬಳಕೆ ಮಾಡಲಿ ಎಂದು ದೆಹಲಿ ಸರ್ಕಾರ ಈ ಅಭಿಯಾನ ಆರಂಭಿಸಿದೆ.