alex Certify ಉಡುಗೆ ಕಾರಣಕ್ಕೆ ಟ್ರೋಲ್‌ ಆಗ್ತಿದೆ ನವ ಜೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಡುಗೆ ಕಾರಣಕ್ಕೆ ಟ್ರೋಲ್‌ ಆಗ್ತಿದೆ ನವ ಜೋಡಿ….!

Are You Wearing Clothes Underneath?' Kerala Couple Bullied Online for 'Post- Wedding' Photoshoot

ಮದುವೆ ಸಮಾರಂಭದಂದು ಫೋಟೋ ತೆಗೆಸಿಕೊಳ್ಳುವ ಕಾಲ ಹಳೆದಾಯ್ತು. ಈಗೇನಿದ್ರೂ ಮದುವೆ ಫೋಟೋಶೂಟ್​ ಜೊತೆಗೆ ಪ್ರೀ ವೆಡ್ಡಿಂಗ್​, ಪೋಸ್ಟ್ ವೆಡ್ಡಿಂಗ್​ ಫೋಟೋಶೂಟ್​ ಅಂತೆಲ್ಲ ಮಾಡ್ತಾರೆ . ಕೇರಳದಲ್ಲೂ ಒಂದು ಜೋಡಿ ಡಿಫರೆಂಟ್​ ಫೋಟೋಶೂಟ್​ ಮಾಡಿಸೋಕೆ ಹೋಗಿ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.

ಸೆಪ್ಟೆಂಬರ್​ 16ರಂದು ಕೇರಳದ ರಿಷಿ ಕಾರ್ತಿಕೇಯನ್​ ಹಾಗೂ ಲಕ್ಷ್ಮೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕರೊನಾ ಹಿನ್ನೆಲೆ ಮದುವೆಯನ್ನ ಸಿಕ್ಕಾಪಟ್ಟೆ ಗ್ರ್ಯಾಂಡ್​ ಆಗಿ ಮಾಡೋಕೆ ಸಾಧ್ಯವಾಗಿರಲಿಲ್ಲ. ಆದರೆ ಪೋಸ್ಟ್ ವೆಡ್ಡಿಂಗ್​ ಶೂಟಿಂಗ್​ ಮಾಡಿಕೊಳ್ಳೋಣ ಅಂತಾ ಪ್ಲಾನ್​ ಮಾಡಿದ ಈ ಜೋಡಿ ಅದಕ್ಕೆ ಡಿಫರೆಂಟ್​ ಕಾಸ್ಟ್ಯೂಮ್​ ಹಾಕೋಕೆ ನಿರ್ಧರಿಸಿದ್ದಾರೆ. ಇಡುಕ್ಕಿ ಚಹ ತೋಟದಲ್ಲಿ ತಮ್ಮ ಗೆಳೆಯ ಅಖಿಲ್​ ಕಾರ್ತಿಕೇಯನ್​ ಎಂಬವರಿಂದ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.

ಸುಮ್ಮನೇ ಎಲ್ಲಾರೂ ಮಾಡೋ ರೀತಿಯಲ್ಲೇ ಇವರು ಫೋಟೋಶೂಟ್​ ಮಾಡಿದ್ದರೆ ಏನೂ ಸಮಸ್ಯೆಯಾಗ್ತಿರಲಿಲ್ಲ. ಆದರೆ ಡಿಫರೆಂಟ್​ ಆಗಿ ಫೋಟೋಶೂಟ್​ ಪ್ಲಾನ್​ ಮಾಡಿದ್ದ ಈ ಜೋಡಿ ಕೇವಲ ಬೆಡ್​ಶೀಟ್​ ಒಂದೇ ಮೈಮೇಲೆ ಇರುವಂತ ರೀತಿಯಲ್ಲಿ ಚಹ ತೋಟದ ಸುತ್ತ ಓಡುತ್ತ ಫೋಟೋ ತೆಗೆಸಿದ್ದಾರೆ. ಇದಕ್ಕೆ ಟ್ರೋಲಿಗರು ಬೇರೆಯದ್ದೇ ಅರ್ಥ ಕಲ್ಪಿಸಿಬಿಟ್ಟಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡ್ತಾ ಇದ್ದಂತೆ ಅನೇಕರು ನೀವು ಬಟ್ಟೆಯನ್ನೇ ಧರಿಸಿಲ್ವಾ ಅಂತೆಲ್ಲ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಾರೆ. ಫೋಟೋಗೆ ಈ ರೀತಿ ಕಮೆಂಟ್​ ಬರ್ತಿದ್ದಂತೆ ಲಕ್ಷ್ಮೀ ಕುಟುಂಬಸ್ಥರು ಈ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿ ಅಂತಾ ಕಿವಿಮಾತನ್ನ ಹೇಳಿದ್ದಾರೆ. ಆದರೆ ನಮ್ಮಿಷ್ಟದಂತೆ ಫೋಟೋ ಬಂದಿದೆ ಅನ್ನೋ ಈ ಜೋಡಿ ಬಿಂದಾಸ್​ ಆಗಿ ಫೋಟೋ ಶೇರ್​ ಮಾಡ್ತಾನೇ ಇದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...