alex Certify ಜಾಹೀರಾತಿಗೆ ಮೋದಿ – ಯೋಗಿ ಫೋಟೋ ಹಾಕಿದ ಸಚಿವನ ಸಹೋದರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿಗೆ ಮೋದಿ – ಯೋಗಿ ಫೋಟೋ ಹಾಕಿದ ಸಚಿವನ ಸಹೋದರ…!

ಮೊಬೈಲ್​ ಫೋನ್​ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ರ ಫೋಟೋ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಸಚಿವರ ಸಹೋದರನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಹಜರತ್​ ಗಂಜ್​ ಪೊಲೀಸ್​ ಠಾಣೆಯಲ್ಲಿ ಡಿಸೆಂಬರ್ 26ರಂದು ಲಲಿತ್​ ಅಗರ್​ವಾಲ್​ ವಿರುದ್ಧ ಎಫ್​ಐಆರ್​​ ದಾಖಲಿಸಲಾಗಿದೆ. ಆರೋಪಿ ಲಲಿತ್​ ಅಗರ್​ವಾಲ್​ ಉತ್ತರ ಪ್ರದೇಶದ ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ಕಪಿಲ್​ ದೇವ್​ ಅಗರ್​ವಾಲ್​ರ ಸಹೋದರನಾಗಿದ್ದಾನೆ. ಈ ವಿಚಾರದಲ್ಲಿ ಸಿಬಿಐ ತನಿಖೆಗೆ ಕಾಂಗ್ರೆಸ್​ ಒತ್ತಾಯಿಸಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕಪಿಲ್​ದೇವ್​ ಅಗರ್​ವಾಲ್​, ನನ್ನ ಸಹೋದರನನ್ನ ಅನಗತ್ಯವಾಗಿ ಟಾರ್ಗೆಟ್​ ಮಾಡಲಾಗ್ತಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ನನ್ನ ಸಹೋದರ ಶೀಘ್ರದಲ್ಲೇ ಆರೋಪ ಮುಕ್ತರಾಗಲಿದ್ದಾರೆ ಎಂದು ಹೇಳಿದ್ರು. ಇನ್ನು ಈ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ ಯುಪಿ ಕಾಂಗ್ರೆಸ್​ ಮುಖ್ಯಸ್ಥ ಅಜಯ್​ ಕುಮಾರ್​ ಲಲ್ಲು, ಈ ಪ್ರಕರಣ ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ತಲೆ ಎತ್ತಿದೆ ಅನ್ನೋದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ. ಈ ಪ್ರಕರಣವನ್ನ ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಿ ತೆರೆಮರೆಯಲ್ಲಿರುವ ಆರೋಪಿಗಳನ್ನೂ ಪತ್ತೆ ಹಚ್ಚಬೇಕಿದೆ ಅಂತಾ ಒತ್ತಾಯಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...