alex Certify ಲಾಕ್ ಡೌನ್ ಸಮಯದಲ್ಲಿ ಅಪ್ಪನಿಗೆ ಮೇಕಪ್ ಮಾಡಿದ ಅಂಬಾನಿ ಪುತ್ರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಸಮಯದಲ್ಲಿ ಅಪ್ಪನಿಗೆ ಮೇಕಪ್ ಮಾಡಿದ ಅಂಬಾನಿ ಪುತ್ರರು

ಲಾಕ್ ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರು ಸವಾಲು ಹಾಕಿಕೊಂಡರು, ವಿಶೇಷ ಖಾದ್ಯ ತಯಾರಿಸಿ ಪ್ರದರ್ಶಿಸಿದ್ದೂ ಆಯಿತು. ಸ್ಟಾರ್ ಗಳು ಸ್ವಲ್ಪ ವಿಭಿನ್ನ ಚಟುವಟಿಕೆ ಮೂಲಕ ಗಮನ ಸೆಳೆದರು.

ಇದೀಗ ಉದ್ಯಮಿ ಅನಿಲ್ ಅಂಬಾನಿಯ ಮುಖಾಲಂಕಾರದ ಅವಧಿಯ ಸುದ್ದಿ ವೈರಲ್ ಆಗಿದೆ. ಅನಿಲ್ ಪುತ್ರರು ತಮ್ಮ ತಂದೆಗೆ ಮೇಕಪ್ ಮಾಡುವ ಸಂದರ್ಭವನ್ನು ಟೀನಾ ಅಂಬಾನಿ ಸೆರೆ ಹಿಡಿದು ಪ್ರಪಂಚಕ್ಕೆ ದರ್ಶನ ಮಾಡಿಸಿದ್ದಾರೆ.

ಮೇ 15ರಂದು ವಿಶ್ವ ಕುಟುಂಬ ದಿನವಾಗಿ ಆಚರಿಸಲಾಗುತ್ತದೆ ಇದೇ ದಿನದಂದು ಈ ಕುಟುಂಬ ಒಟ್ಟಾಗಿ ಕಾಣಿಸಿಕೊಂಡಿದೆ.

ಮಕ್ಕಳಾದ ಅನ್ಮೋಲ್ ಹಾಗೂ ಅನ್ಶುಲ್ ಅವರು ಅನಿಲ್ ಅಂಬಾನಿಯವರ ತಲೆಗೂದಲನ್ನು ಟ್ರಿಮ್ ಮಾಡುವುದು ಫೋಟೋದಲ್ಲಿ ಕಾಣಬಹುದು.

ಜಾಗತಿಕವಾಗಿ ಸಮಸ್ಯೆ ಎದುರಾದ ವೇಳೆ ಕುಟುಂಬದ ಮಹತ್ವದ ಅರಿವಾಗಿದೆ ಎಂಬ ಸಾಲುಗಳೊಂದಿಗೆ ಟೀನಾ ಫೋಟೊ ಹಂಚಿಕೊಂಡಿದ್ದಾರೆ. ಜತೆಗೆ ವಿಶ್ವ ಕುಟುಂಬ ದಿನದ ನೆನಪು ಮಾಡಿಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...