alex Certify ಬ್ಯಾಲೆಟ್ ಪೇಪರ್‌ ಜೊತೆ ಯುವಕನ ಸೆಲ್ಫಿ: ಮತ ಅಸಿಂಧುಗೊಳಿಸಿದ ಚುನಾವಣಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಲೆಟ್ ಪೇಪರ್‌ ಜೊತೆ ಯುವಕನ ಸೆಲ್ಫಿ: ಮತ ಅಸಿಂಧುಗೊಳಿಸಿದ ಚುನಾವಣಾಧಿಕಾರಿ

Andhra Youth's Vote Declared Invalid after His Ballot Paper Selfie Goes Viral

ಆಂಧ್ರ ಪ್ರದೇಶಾದ್ಯಂತ ಗುರುವಾರದಂದು ಮಂಡಲ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಚುನಾವಣೆ ವೇಳೆ ಮತದಾನ ಮಾಡಿದ ಯುವಕನೊಬ್ಬ ಮತಚೀಟಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ ಕಾರಣ ಆತನ ಮತವನ್ನು ಅಸಿಂಧುಗೊಳಿಸಲಾಗಿದೆ.

ಪೂರ್ವ ಗೋದಾವರಿಯ ಪಲ್ಲಂಕುರ‍್ರು ಮತಗಟ್ಟೆ ಬಳಿ ಏಪ್ರಿಲ್ 8ರಂದು ಈ ಘಟನೆ ಜರುಗಿದೆ. ಕಾಶಿ ವೆಂಕಟರಮಣ ಹೆಸರಿನ ಈ ಯುವಕ ತನ್ನ ಮತಚೀಟಿಯಲ್ಲಿದ್ದ ಗುರುತೊಂದಕ್ಕೆ ಮತ ಚಲಾಯಿಸಿ, ಬಳಿಕ ಅದರೊಂದಿಗೆ ಸೆಲ್ಫೀ ತೆಗೆದುಕೊಂಡು ಶೇರ್‌ ಮಾಡಿದ್ದಾನೆ. ಈ ಕಾರಣದಿಂದ ಆತನ ಮತವನ್ನೇ ರದ್ದು ಮಾಡಲಾಗಿದೆ.

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಪಂಚಾಯತ್‌ ರಾಜ್‌ ಕಾಯಿದ 1994ರ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಈ ಯುವಕನ ಮತವನ್ನು ಪೂರ್ವ ಗೋದಾವರಿ ಜಿಲ್ಲಾ ಕಲೆಕ್ಟರ್‌ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ. ಮುರಳೀಧರ ರೆಡ್ಡಿ ಅಸಿಂಧುವೆಂದು ನಿರ್ಣಯಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...