alex Certify ಈ ಫೋಟೋಗೆ ಶೀರ್ಷಿಕೆ ನೀಡಿದವರಿಗೆ ಸಿಗುತ್ತಿದೆ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋಗೆ ಶೀರ್ಷಿಕೆ ನೀಡಿದವರಿಗೆ ಸಿಗುತ್ತಿದೆ ಕಾರು…!

Anand Mahindra Wants You to Caption Photo of Monkey, Will Gift Scale Model of Cars to Winners

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯ ಆನಂದ್ ಮಹೀಂದ್ರಾ, ಹೊಸತೊಂದು ಸವಾಲಿನೊಂದಿಗೆ ಬಂದಿದ್ದಾರೆ.

ಕಟ್ಟಡವೊಂದರ ಮೇಲೆ ಡಿಶ್ ಟಿವಿಯ ಉಪಕರಣ ಅಳವಡಿಸಿದ್ದು, ಅದರ ಮೇಲೆ ಮಂಗವೊಂದು ಕುಳಿತಿದೆ. ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವ ಈ ಫೋಟೋ ವೈರಲ್ ಆಗಿದೆ.

ಫೋಟೋ ಮಾತ್ರ ಹಾಕದೆ, ಬಹುಮಾನವನ್ನೂ ಘೋಷಿಸಿದ್ದಾರೆ. ಡಿಶ್ ಟಿವಿಯ ಆಂಟೆನಾ (ಸಿಗ್ನಲ್ ರಿಸಿವರ್) ಮೇಲೆ ಕುಳಿತ ಕೋತಿಯ ಫೋಟೋಗೆ ಯಾರು ಅತ್ಯುತ್ತಮ ಶೀರ್ಷಿಕೆ (ಕ್ಯಾಪ್ಟನ್ ) ಕೊಡುತ್ತಾರೆಯೋ ಅವರಿಗೆ ಕಾರೊಂದನ್ನು ಬಹುಮಾನವಾಗಿ ಕೊಡುವ ಘೋಷಣೆ ಮಾಡಿದ್ದರು.

ಅದಕ್ಕೂ ಷರತ್ತು ವಿಧಿಸಿದ್ದಾರೆ. ತಮ್ಮ ಮುಂದಿನ ಕ್ಯಾಪ್ಶನ್ ಕಾಂಪಿಟೇಶನ್ ಗೆ ಇದಕ್ಕಿಂತ ಉತ್ತಮ ಚಿತ್ರ ಇನ್ನೊಂದಿಲ್ಲ ಎಂದಿರುವ ಅವರು, ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ ಕ್ಯಾಪ್ಶನ್ ಕೊಡಬೇಕೆಂದು ಷರತ್ತು ಹಾಕಿದ್ದಾರೆ. ಎರಡೂ ಭಾಷೆಯ ಒಂದೊಂದು ಅತ್ಯುತ್ತಮ ಕ್ಯಾಪ್ಶನ್ ಮಹೀಂದ್ರಾ ಸ್ಕೇಲ್ ಮಾಡೆಲ್ ಕಾರನ್ನು ಉಡುಗೊರೆಯಾಗಿ ಕೊಡಲಾಗುವುದು ಎಂದಿದ್ದಾರೆ. ಇದಕ್ಕಾಗಿ ಅಕ್ಟೋಬರ್‌ 11 ರ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದ್ದು, ನೆಟ್ಟಿಗರು ಕ್ಯಾಪ್ಶನ್ ಮೇಲೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಸಾಕಷ್ಟು ಫನ್ನಿ ಕಮೆಂಟ್ ಗಳನ್ನೂ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...