alex Certify ʼಕೋವಿಡ್ʼ ಸಂಕಷ್ಟದ ನಡುವೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ ಸಂಕಷ್ಟದ ನಡುವೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುತ್ತೆ ಈ ವಿಡಿಯೋ

ಕೋವಿಡ್ ಸಾಂಕ್ರಮಿಕದಿಂದಾಗಿ ಜಗತ್ತಿನೆಲ್ಲೆಡೆ ಬಹಳಷ್ಟು ಮಾನವ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಎಲ್ಲೆಲ್ಲೂ ಮಾಸ್ಕ್‌ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕ್ರಮಗಳೇ ಗೋಚರಿಸುತ್ತಿದ್ದು ಒಂದು ರೀತಿಯ ನೀರವತೆ ಮನುಕುಲವನ್ನು ಆವರಿಸಿದೆ.

ಯಾವಾಗ ಎಂದಿನಂತೆ ಜೀವನ ನಡೆಸುವ ದಿನಗಳು ಬರುತ್ತವೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದಕ್ಕೆ ಮಹಿಂದ್ರಾ ಸಮೂಹದ ಚೇರ್ಮನ್‌ ಆನಂದ್ ಮಹಿಂದ್ರಾ ಕೂಡ ಹೊರತಲ್ಲ. ಜೂನ್ 9ರಂದು ಆನಂದ್ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ ವಿಡಿಯೋವೊಂದರಲ್ಲಿ ಸಾಕುನಾಯಿಯೊಂದು ಫುಟ್ಬಾಲ್ ಮ್ಯಾಚ್ ನೋಡುತ್ತಿದ್ದು, ಆಟಗಾರರು ಗೋಲ್ ಗಳಿಸುತ್ತಲೇ ಅದರ ಮುಖದ ಮೇಲಿನ ಪ್ರತಿಕ್ರಿಯೆ ನೋಡುವುದೇ ಚಂದ ಎಂಬಂತಿದೆ.

“ಸಾಂಕ್ರಮಿಕ ಸಂಕಷ್ಟ ಕಳೆದಿದೆ ಎಂದು ಯಾರಾದರೂ ಘೋಷಿಸಿದಲ್ಲಿ ನನ್ನ ಪ್ರತಿಕ್ರಿಯೆಯೂ ಹೀಗೇ ಇರಲಿದೆ” ಎಂದು ಮಹಿಂದ್ರಾ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...