alex Certify 22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ ಆಮ್ಲಜನಕ ಕಡಿತಗೊಳಿಸಿದ ಪರಿಣಾಮವಾಗಿ ಬರೋಬ್ಬರಿ 22 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ ವಿಡಿಯೋವೊಂದು ವೈರಲ್​ ಆಗಿದೆ.

ಆಕ್ಸಿಜನ್​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ..? ಈ ರೀತಿಯ ಚಟುವಟಿಕೆಯಿಂದ ವೈದ್ಯಕೀಯ ಆಮ್ಲಜನಕವಿಲ್ಲದೇ ರೋಗಿ ಬದುಕುಳಿಯಬಹುದೇ ಎಂದು ಪರೀಕ್ಷೆ ಮಾಡುವ ಸಲುವಾಗಿ ಮಾಡಿದ ಪ್ರಯತ್ನ ಇದಾಗಿತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನ ಆಸ್ಪತ್ರೆ ಮಾಲೀಕ ಈ ವಿಡಿಯೋದಲ್ಲಿ ಹೇಳಿದ್ದಾನೆ.

ಈ ವಿವಾದಾತ್ಮಕ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿದ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್​ ಪಿ.ಎನ್.​ ಸಿಂಗ್​ ಹಾಗೂ ಸಿಎಂಓ ಆರ್​.ಸಿ ಪಾಂಡೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಈ ಆಸ್ಪತ್ರೆಯಲ್ಲಿ 22 ಮಂದಿ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಅವರ ಸಾವಿನ ಬಗ್ಗೆ ಆಸ್ಪತ್ರೆಯಿಂದ ಇನ್ನೂ ಯಾವುದೇ ನಿಖರ ವಿವರಣೆಗಳು ಹೊರಬಿದ್ದಿಲ್ಲ ಎಂದು ಪಿ.ಎನ್.​ ಸಿಂಗ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...