ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಸಾಕಷ್ಟು ವಿಡಿಯೋಗಳು ಹರಿದಾಡ್ತಾನೇ ಇರುತ್ತದೆ. ಇದೇ ಸಾಲಿಗೆ ತಾಯಿ ಹಾಗೂ ಪುಟ್ಟ ಮಗುವಿನ ಜುಗಲ್ಬಂಧಿಯ ವಿಡಿಯೋ ಕೂಡ ಸೇರಿದ್ದು ಇದನ್ನ ವೀಕ್ಷಿಸಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ವಿಡಿಯೋದಲ್ಲಿ ಮಹಿಳೆ ಹಾಗೂ ಆಕೆಯ ಮಗು ಬಾಲಿವುಡ್ನ ತಮಾಷಾ ಸಿನಿಮಾದ ಅಗರ್ ತುಮ್ ಸಾಥ್ ಹೋ ಎಂಬ ಹಾಡನ್ನ ಹಾಡಿದ್ದಾರೆ. ತಾಯಿ ಸಂಗೀತ ವಾದ್ಯದೊಂದಿಗೆ ಹಾಡುತ್ತಿದ್ದರೆ ಪುಟಾಣಿ ಮಗಳು ತಾಯಿಯ ಹಾಡಿಗೆ ದನಿಗೂಡಿಸಿದ್ದಾಳೆ.
ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ
ಅಂಜನಾ ಮಡಥಿಲ್ ಬಹಳ ಸುಂದರವಾಗಿ ಈ ಹಾಡನ್ನ ಹಾಡಿದ್ದಾರೆ. ಫೇಸ್ಬುಕ್ನಲ್ಲಿ ಈ ವಿಡಿಯೋ ಶೇರ್ ಮಾಡಿರುವ ಅಂಜಲಿ, ಯುಕುಲೇಲೆ ಜೊತೆ ನನ್ನ ಮೊದಲ ಪ್ರಯತ್ನ ಇದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ತಾಯಿಯ ಜೊತೆ ಪುಟ್ಟ ಮಗಳು ದನಿಗೂಡಿಸಿದ್ದನ್ನ ಕಂಡು ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
https://www.facebook.com/anjana.madathil.1/videos/3919514344806007/?t=46