alex Certify ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ

ಏಪ್ರಿಲ್‌ 29 ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನ 1982ರಲ್ಲಿ ಯುನೆಸ್ಕೋದ ಇಂಟರ್​ನ್ಯಾಷನಲ್​ ಥಿಯೇಟರ್​ ಇನ್​ಸ್ಟಿಟ್ಯೂಟ್​​ ನೃತ್ಯ ಸಮಿತಿ ಆರಂಭಿಸಿತು. ಆಧುನಿಕ ಬ್ಯಾಲೆ ಸೃಷ್ಟಿಕರ್ತ ಜೀನ್​ ಜಾರ್ಜಸ್​ ನೊವರ್ರೆ ಜನ್ಮದಿನದ ಸವಿನೆನಪಿಗೆ ಪ್ರತಿ ವರ್ಷ ಏಪ್ರಿಲ್​ 29ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗುತ್ತದೆ.

ರಾಜಕೀಯ, ಸಾಂಸ್ಕೃತಿಕ ಹಾಗೂ ಜನಾಂಗೀಯ ಎಲ್ಲೆಗಳನ್ನ ಮೀರಿದ ನೃತ್ಯದ ಮಹತ್ವವನ್ನ ವಿಶ್ವಕ್ಕೆ ಸಾರುವ ಸಲುವಾಗಿ ಈ ದಿನವನ್ನ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ನೃತ್ಯ ದಿನದ ಪ್ರಯುಕ್ತ ಬಾಲಿವುಡ್​ನಲ್ಲಿ ಫೇಮಸ್​ ಆದ ಕೆಲ ಪ್ರಸಿದ್ಧ ನೃತ್ಯಗಳು ಇಲ್ಲಿವೆ,

ಚಯ್ಯಾ ಚಯ್ಯಾ : 1998ರಲ್ಲಿ ತೆರೆ ಕಂಡ ಬಾಲಿವುಡ್​ ಸಿನಿಮಾ ʼದಿಲ್ ಸೇʼ ಚಯ್ಯಾ ಚಯ್ಯಾ ಹಾಡು ಹಾಗೂ ನೃತ್ಯ ಈಗಲೂ ಪ್ರಸಿದ್ಧಿ ಪಡೆದಿದೆ. ಸುಖ್​ವಿಂದರ್​​ ಸಿಂಗ್​ ಹಾಡಿರುವ ಈ ಹಾಡಿನಲ್ಲಿ ಶಾರೂಖ್​ ಖಾನ್​ ಹಾಗೂ ಮಲೈಕಾ ಅರೋರಾ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಎಕ್​ ಪಲ್​ ಕಾ ಜೀನಾ : ಈ ಹಾಡಂತೂ 90ರ ದಶಕದಲ್ಲಿ ಬಾಲ್ಯ ಕಳೆದ ಪ್ರತಿಯೊಬ್ಬರು ಭಾರೀ ಇಷ್ಟವಾಗುವ ಹಾಡು ಹಾಗೂ ನೃತ್ಯ. 2000ದಲ್ಲಿ ತೆರೆ ಕಂಡ ಕಹೋ ನಾ ಪ್ಯಾರ್​​ ಹೈ ಸಿನಿಮಾದ ಹಾಡಾಗಿದೆ. ಈ ಹಾಡಿಗೆ ಹೃತಿಕ್​ ರೋಷನ್​ ತಮ್ಮ ನೃತ್ಯದ ಮೂಲಕ ಜಾದೂ ಮಾಡಿದ್ದಾರೆ.

ಹುಡ್​ ಹುಡ್​ ದಬಂಗ್ : 2010ರಲ್ಲಿ ತೆರೆಕಂಡ ದಬಂಗ್​ ಸಿನಿಮಾದ ಈ ಹಾಡಿಗೆ ಸಲ್ಮಾನ್​ ಖಾನ್​ ಮಾಡಿದ್ದ ನೃತ್ಯ ಟ್ರೆಂಡ್ ಕ್ರಿಯೇಟ್​ ಮಾಡಿತ್ತು.

ಲುಂಗಿ ಡ್ಯಾನ್ಸ್​ : ರೋಹಿತ್​ ಶೆಟ್ಟಿ ನಿರ್ಮಾಣದ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾ ಚೆನ್ನೈ ಎಕ್ಸ್​ಪ್ರೆಸ್​ ಸಿನಿಮಾದ ಈ ಹಾಡಿಗೂ ಇಂದಿಗೂ ಅನೇಕರ ಹಾಟ್​ ಫೇವರಿಟ್​​. ಈ ಹಾಡನ್ನ ಹನಿ ಸಿಂಗ್​ ಹಾಡಿದ್ದರೆ, ಶಾರೂಕ್​ ಖಾನ್​ ಹಾಗೂ ದೀಪಿಕಾ ಪಡುಕೋಣೆ ಸಖತ್​ ನೃತ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...