alex Certify ಲಾಕ್ ಡೌನ್ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುತ್ತೆ ಈ ವಿಡಿಯೋ

ಇದಕ್ಕೇ ಹೇಳೋದು ಶಿಸ್ತು ಅಂತ. ಆನೆ ನಡೆದಿದ್ದೇ ದಾರಿ ಅಂತ ಹೇಳ್ಬೋದು. ಆದರೆ ಈ ಆನೆ, ಆನೆ ಮರಿಗಳು ದಾರಿಯಲ್ಲೇ ನಡೆದು, ನೆಟ್ಟಿಗರ ಮನಗೆದ್ದಿವೆ. ಈ ವಿಡಿಯೋವೀಗ ಫುಲ್ ವೈರಲ್ ಆಗಿದೆ.

ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ A train of #elephants. You will see some football rolling also. (ಆನೆಗಳ ರೈಲು, ನೀವಿಲ್ಲ ಫುಟ್ಬಾಲ್ ಉರುಳುವಿಕೆಯನ್ನೂ ಕಾಣಬಹುದು) ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವಿಡಿಯೋವನ್ನು ಗಮನಿಸಿದರೆ, ಆನೆಗಳ ಹಿಂಡೇ ರಸ್ತೆ ದಾಟುತ್ತವೆ. ಅವುಗಳಲ್ಲಿ ಪುಟ್ಟ ಪುಟ್ಟ ಮರಿ ಆನೆಗಳೂ ಅಷ್ಟೇ ಶಿಸ್ತಿನಿಂದ ತಮ್ಮವರನ್ನು ಫಾಲೋ ಮಾಡುತ್ತವೆ. ಇದನ್ನು ನೋಡಲು ತುಂಬಾ ಕ್ಯೂಟ್ ಅನ್ನಿಸುತ್ತದೆ. ಇದು ಹಲವು ನೆಟ್ಟಿಗರನ್ನು ಆಕರ್ಷಿಸಿದೆ.

ನನಗೆ ಬೇಬಿ ಎಲಿಫೆಂಟ್ ಮೇಲೆ ಸಖತ್ ಲವ್ ಆಗಿದೆ ಎಂದು ಒಬ್ಬರು ಬರೆದುಕೊಂಡರೆ, ತಮ್ಮ ಪುಟ್ಟ ಮರಿಗಳನ್ನು ಇವು ಹೇಗೆ ರಕ್ಷಣೆ ಮಾಡಿಕೊಳ್ಳುತ್ತವೆ ಎಂಬುದನ್ನು ನೋಡಲು ಖುಷಿಯೆನಿಸುತ್ತದೆ ಎಂದು ಮಗದೊಬ್ಬರು ಬರೆದುಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ 19.8k ವೀಕ್ಷಣೆ ಕಂಡಿದೆ. 43 ಸೆಕೆಂಡ್ ಗಳ ವಿಡಿಯೋ ಇದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...