alex Certify ಪಿಯುಸಿಯಲ್ಲಿ ನಟ ಮಾಧವನ್ ಗಳಿಸಿದ ಮಾರ್ಕ್ಸ್ ಎಷ್ಟು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಯುಸಿಯಲ್ಲಿ ನಟ ಮಾಧವನ್ ಗಳಿಸಿದ ಮಾರ್ಕ್ಸ್ ಎಷ್ಟು ಗೊತ್ತಾ..?

ಮೊನ್ನೆಯಷ್ಟೆ ಪಿಯುಸಿ ರಿಸಲ್ಟ್ ಬಂದಿದೆ. ಅನೇಕ ಮಂದಿ ಸೆಲೆಬ್ರೆಟಿಗಳು ಪಾಸ್ ಆದ ಮಕ್ಕಳಿಗೆ ವಿಶ್ ಮಾಡಿದ್ದಾರೆ. ಅತ್ತ ಪಿಯುಸಿ ರಿಸಲ್ಟ್ ಬರುತ್ತಿದ್ದಂತೆ, ಇತ್ತ ಸೆಲೆಬ್ರಿಟಿಗಳ ಪಿಯುಸಿ ಪಾಸ್ ಬಗ್ಗೆ ಟಾಕ್ ಪ್ರಾರಂಭವಾಗಿದೆ. ಅನೇಕ ಮಂದಿ ಸೆಲೆಬ್ರಿಟಿಗಳು ತಮ್ಮ ಪಿಯುಸಿ ಪಾಸ್ ಆದ ದಿನವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲ ಕಡಿಮೆ ಅಂಕ ಗಳಿಸಿದ ಅನೇಕರಿಗೆ ಬುದ್ದಿ ಮಾತನ್ನು ಹೇಳುತ್ತಿದ್ದಾರೆ.

ಹೌದು, ಅನೇಕ ಮಂದಿ ಸಾಧಕರಲ್ಲಿ ಪಿಯುಸಿಯಲ್ಲಿ ಅಂಕ ಕಡಿಮೆ ತೆಗೆದ ಸಾಧಕರೂ ಇದ್ದಾರೆ. ಇದರಲ್ಲಿ ಮಾಧವನ್ ಕೂಡ ಒಬ್ಬರು. ಈ ಬಗ್ಗೆ ಟ್ವಿಟ್ ಮಾಡಿರುವ ಮಾಧವನ್, ಬೋರ್ಡ್ ಎಕ್ಸಾಂನಲ್ಲಿ ನಾನು ಪಡೆದಿದ್ದು ಶೇ.58 ಮಾರ್ಕ್ಸ್ ಮಾತ್ರ ಎಂದು ಹೇಳುವ ಮೂಲಕ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ. ಜೊತೆಗೆ ಜೀವನದ ಆಟ ಇನ್ನೂ ಶುರು ಆಗಿಲ್ಲ ನನ್ನ ಸ್ನೇಹಿತರೇ ಎಂದು ಹೇಳುವ ಮೂಲಕ ಅನೇಕರಿಗೆ ಜೀವನದ ಬುದ್ದಿ ಹೇಳಿದ್ದಾರೆ.

ಮಾಧವನ್ ಅವರು ಕಡಿಮೆ ಅಂಕ ಪಡೆದಿದ್ದರೂ ಅವರ ಸಾಧನೆ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಕಡಿಮೆ ಅಂಕ ಬಂದರೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ. ಸಾಧನೆಯ ಬೆನ್ನಟ್ಟಿ ಮುಂದೆ ಸಾಗುತ್ತಿರಬೇಕು ಎಂಬುದು ಅವರ ಮಾತು. ಮಾಧವನ್ ಅವರ ಈ ಟ್ವಿಟ್‌ಗೆ ನೆಟ್ಟಿಗರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...