alex Certify 17ರ ಗಾಯಕನ ಅಕಾಲಿಕ ಮರಣಕ್ಕೆ ನೆಟ್ಟಿಗರ ಕಂಬನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17ರ ಗಾಯಕನ ಅಕಾಲಿಕ ಮರಣಕ್ಕೆ ನೆಟ್ಟಿಗರ ಕಂಬನಿ

ತನ್ನ ಮಧುರವಾದ ಕಂಠಸಿರಿಯಿಂದ ಸೆನ್ಸೇಷನ್ ಆಗಿದ್ದ ಅಸ್ಸಾಂನ 17 ವರ್ಷದ ರಿಶಬ್ ದತ್ತಾ ಬೆಂಗಳೂರಿನಲ್ಲಿ ತನ್ನ ಕೊನೆಯುಸಿರೆಳೆದಿದ್ದಾನೆ. ಅಪ್ಲಾಸ್ಟಿಕ್ ಅನೇಮಿಯಾ ಎಂಬ ಅಪರೂಪದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ಹಾಡುಗಾರನ ದೇಹದಲ್ಲಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಹೊಸ ರಕ್ತ ಕಣಗಳ ಉತ್ಪಾದನೆ ಆಗುತ್ತಿರಲಿಲ್ಲ.

ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ, ’ಚನ್ನಾ ಮರೆಯಾ’ ಚಿತ್ರದ ’ಏ ದಿಲ್ ಹೈ ಮುಷ್ಕಿಲ್’ ಹಾಡಿಗೆ ಗಿಟಾರ್‌ ಹಿಡಿದುಕೊಂಡೇ ದನಿ ನೀಡಿದ್ದ ರಿಶಬ್‌ನ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಮತ್ತೊಂದು ವಿಡಿಯೋದಲ್ಲಿ, ತಮ್ಮ ಇಚ್ಚೆಯ ಹಾಡನ್ನು ಹೇಳಲು ಖುದ್ದು ವೈದ್ಯರು ಹಾಗೂ ಸಿಬ್ಭಂದಿಯೇ ಆತನಲ್ಲಿ ಮನವಿ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಈಗ ಫೇಸ್ಬುಕ್‌ನಲ್ಲಿ ವೈರಲ್ ಆಗಿದೆ. ಹದಿಹರೆಯದ ಗಾಯಕನ ಈ ಅಕಾಲಿಕ ಅಗಲಿಕೆಗೆ ನೆಟ್ಟಿಗ ಸಮುದಾಯ ಕಂಬನಿ ಮಿಡಿದಿದೆ.

rishav dutta

এই যে গীত গাই থকা ল'ৰাজন !তেওঁ আজি গীতটোত গাই থকাৰ দৰে সঁচাকৈয়ে আমাৰ মাজৰ পৰা গুচি গ'ল। তেওঁ ঋষভ দত্ত । ঘৰ তিনিচুকীয়াৰ কাকপথাৰত। দুৰাৰোগ্য ৰোগত আক্ৰান্ত হৈ বেংলুৰত মৃত্যু হয় ঋষভৰ। এটা সুন্দৰ কণ্ঠৰ অধিকাৰী ঋষভলৈ অযুত অশ্রুঞ্জলী..!

Posted by Monjit Gogoi on Thursday, July 9, 2020

ঋষভ দত্ত

ভাল মানুহৰ লগতে সদায় বেয়া কিয় হয় ?মৃত ঋষভৰ অন্য এটা ভিডিঅ' ! কেইদিনমান আগতে বহিঃৰাজ্যৰ চিকিৎসালয়ৰ কোঠাত হাঁহি ভালপোৱা ঋষভ চিকিসকসকলৰ বাবেও প্রিয় আছিল !

Posted by Monjit Gogoi on Thursday, July 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...