alex Certify ವಿದೇಶದಿಂದ ಬರಲಿದ್ದಾರೆ 2 ಲಕ್ಷ ಭಾರತೀಯರು, ವಿಶ್ವದಲ್ಲೇ ಅತಿ ದೊಡ್ಡ ಏರ್ ಲಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಿಂದ ಬರಲಿದ್ದಾರೆ 2 ಲಕ್ಷ ಭಾರತೀಯರು, ವಿಶ್ವದಲ್ಲೇ ಅತಿ ದೊಡ್ಡ ಏರ್ ಲಿಫ್ಟ್

ವಿದೇಶದಲ್ಲಿ ಸಿಲುಕಿರುವ 14,800 ಭಾರತೀಯರನ್ನು ಮೊದಲ ಹಂತದಲ್ಲಿ 64 ವಿಮಾನಗಳಲ್ಲಿ ಏರ್ಲಿಫ್ಟ್ ಮಾಡಲಾಗುವುದು. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 24 ವಿಮಾನಗಳು, ಏರ್ ಇಂಡಿಯಾದ 40 ವಿಮಾನಗಳಲ್ಲಿ ಏರ್ಲಿಫ್ಟ್ ಮಾಡಲಾಗುವುದು.

ವಿದೇಶಗಳಿಂದ ವಾಪಸ್ ಬರುವವರು ತಮ್ಮ ವಿಮಾನ ಟಿಕೆಟ್ ದರ ಪ್ರಯಾಣದ ವೆಚ್ಚವನ್ನು ತಾವೇ ಭರಿಸಬೇಕಿದೆ. ಮೇ 7 ರಿಂದ 13 ರವರೆಗೆ ಹಂತ ಹಂತವಾಗಿ ವಿವಿಧ ದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲಾಗುವುದು.

ಸುಮಾರು 2 ಲಕ್ಷ ಭಾರತೀಯರನ್ನು ಕರೆ ತರಲು ಯೋಜನೆ ಸಿದ್ಧಪಡಿಸಲಾಗಿದೆ. ಉದ್ಯೋಗ, ಪ್ರವಾಸ, ಶಿಕ್ಷಣ ಮೊದಲಾದ ಕಾರಣಕ್ಕೆ ವಿದೇಶಕ್ಕೆ ತೆರಳಿದವರನ್ನು ಕರೆ ತರಲಾಗುತ್ತಿದೆ. ಗಲ್ಫ್ ರಾಷ್ಟ್ರಗಳು, ಅಮೆರಿಕಾ, ಸಿಂಗಾಪುರ, ಬಾಂಗ್ಲಾದೇಶ, ಬ್ರಿಟನ್ ಸೇರಿದಂತೆ 13 ರಾಷ್ಟ್ರಗಳಿಂದ ಭಾರತೀಯರನ್ನು ಕರೆ ತರಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಇದು ವಿಶ್ವದಲ್ಲಿಯೇ ಅತಿ ದೊಡ್ಡ ಏರ್ಲಿಫ್ಟ್ ಆಗಿದೆ. ಭಾರತದ ವಿದೇಶಾಂಗ ಸಚಿವಾಲಯ, ವಿಮಾನಯಾನ ಸಚಿವಾಲಯ, ರಕ್ಷಣಾ ಸಚಿವಾಲಯಗಳು ಅತಿದೊಡ್ಡ ಕಾರ್ಯಾಚರಣೆಗೆ ಸಜ್ಜಾಗಿವೆ. ಕೊರೋನಾ ಸೋಂಕಿನ ಲಕ್ಷಣ ಇರುವವರನ್ನು ಕರೆತರುವುದಿಲ್ಲ. ವಿಮಾನ ಹತ್ತುವ ಮೊದಲು ಆರೋಗ್ಯ ತಪಾಸಣೆ ನಡೆಸಲಾಗುವುದು. ಭಾರತಕ್ಕೆ ಬಂದ ಬಳಿಕ ಮತ್ತೊಮ್ಮೆ ತಪಾಸಣೆ ನಡೆಸಿ ಕ್ವಾರಂಟೈನ್ ಗೆ ಕಡ್ಡಾಯವಾಗಿ ಕಳುಹಿಸಲಾಗುವುದು.

ಅದೇ ರೀತಿ ಪಶ್ಚಿಮ ಆಫ್ರಿಕಾ ಮತ್ತು ಮಾಲ್ಡೀವ್ಸ್ ನಲ್ಲಿ ಸಿಲುಕಿರುವ ಭಾರತೀಯರನ್ನು ನೌಕಾಪಡೆಯ ಹಡಗುಗಳ ಮೂಲಕ ಕರೆತರಲಾಗುವುದು. ಗಲ್ಫ್ ರಾಷ್ಟ್ರಗಳಿಂದಲೂ ಭಾರತೀಯರು ನೌಕಾಪಡೆ ಹಡಗುಗಳಲ್ಲಿ ಆಗಮಿಸಲಿದ್ದಾರೆ. ಹಂತ ಹಂತವಾಗಿ ವಿವಿಧ ದೇಶಗಳಲ್ಲಿರುವ ಭಾರತೀಯರನ್ನು ಕರೆತರಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...