alex Certify ದೆಹಲಿ ಟ್ರಾಫಿಕ್ ಜಾಮ್ ಏನಾದ್ರು ನೋಡಿದ್ರೆ ʼಕೊರೊನಾʼಗೆ ಆಗುತ್ತೆ ಗಾಬರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಟ್ರಾಫಿಕ್ ಜಾಮ್ ಏನಾದ್ರು ನೋಡಿದ್ರೆ ʼಕೊರೊನಾʼಗೆ ಆಗುತ್ತೆ ಗಾಬರಿ…!

ದೆಹಲಿಯ ಕಾಶ್ಮೀರೀ ಗೇಟ್ ಬಳಿಯ ಅಂತರರಾಜ್ಯ ಬಸ್ ಟರ್ಮಿನಲ್ (ISBT) ಬಳಿ ಸಂಚಾರ ದಟ್ಟಣೆಯ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಾಹನಗಳು ಒಂದೇ ಒಂದು ಇಂಚೂ ಸಹ ಚಲಿಸಲಾರದ ಮಟ್ಟಿಗೆ ರಸ್ತೆ ಜಾಮ್ ಪ್ಯಾಕ್ ಆಗಿದ್ದು, ಈ ಸಾಲುಗಳು ಕೊನೆಯೇ ಇಲ್ಲದಂತೆ ಕಾಣುತ್ತಿದ್ದು, ಗಂಟೆಗಟ್ಟಲೇ ಅಲ್ಲೇ ನಿಂತುಬಿಟ್ಟಿವೆ. ಈ ಚಿತ್ರಗಳನ್ನು ಜುಲೈ 27ರಂದು ಸೆರೆಹಿಡಿಯಲಾಗಿದೆ.

ಮುಂಬೈಯಂತೆ ದೆಹಲಿ ಸಹ ಕೊರೊನಾ ವೈರಸ್‌ನಿಂದ ಭಾರೀ ಪೀಡಿತಗೊಂಡಿದ್ದು, ಕೇಂದ್ರ ಸರ್ಕಾರ ನಿಧಾನವಾಗಿ ಲಾಕ್‌ಡೌನ್ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದಂತೆಯೇ ಈ ಊರುಗಳ ಸಂಚಾರ ದಟ್ಟಣೆಯು ನಾರ್ಮಲ್ ಸ್ಥಿತಿಗೆ ಬಂದುಬಿಟ್ಟಿದೆ. ಸೋಂಕಿಗೆ ಇನ್ನೂ ಔಷಧವನ್ನೇ ಕಂಡು ಹಿಡಿಯದ ಘಳಿಗೆಯಲ್ಲಿ ಹೀಗೆ ಮನೆಗಳಿಂದ ಆಚೆ ಬರುವುದು ತರವೇ ಎಂಬ ಹಲವಾರು ಪ್ರಶ್ನೆಗಳನ್ನು ಈ ಪೋಸ್ಟ್ ಹುಟ್ಟುಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...