alex Certify ಸಾಲುಸಾಲಾಗಿ ಬಂದ್ವು 10 ಕ್ಕೂ ಅಧಿಕ ಸಿಂಹಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲುಸಾಲಾಗಿ ಬಂದ್ವು 10 ಕ್ಕೂ ಅಧಿಕ ಸಿಂಹಗಳು

ಸಿಂಹಗಳ ಗುಂಪೊಂದು ನೀರು ಕುಡಿಯಲು ಬಂದ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌

ಗಂಭೀರ ನಡಿಗೆಯಲ್ಲಿ ಬರುವ ಐದು ಸಿಂಹಗಳ ಹಿಂದೆ‌ 10 ಕ್ಕೂ ಹೆಚ್ಚು ಮರಿಗಳು ಬಂದು ಹಳ್ಳದಲ್ಲಿ ನೀರು ಕುಡಿದು ಅದೇ ಹಳ್ಳವನ್ನು ದಾಟಿ ಹೋಗುತ್ತವೆ.

ವಿಶ್ವ ಸಿಂಹ ದಿನದ ಅಂಗವಾಗಿ ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಆ.9 ರಂದು ವಿಡಿಯೋ ಶೇರ್ ಮಾಡಿದ್ದಾರೆ.

“ಸಿಂಹಗಳ ಈ ಸಂಭ್ರಮ ನೀವು ಯಾವಾಗಲಾದರೂ ನೋಡಿದ್ದೀರಾ..?” ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.
ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದ ವಿಡಿಯೋ ಇದಾಗಿದೆ.‌

ಅಮೆರಿಕದಲ್ಲಿ ನೆಲೆಸಿರುವ ಭಾರತೀಯನೊಬ್ಬ “ಗುಜರಾತ್ ಗಿರ್ ನಂಥ ವನ್ಯಜೀವಿಧಾಮ‌ದಲ್ಲಿ ಹೊಂದಿರುವ ನಾವೇ ಧನ್ಯ” ಎಂದು ಪ್ರತಿಕ್ರಿಯಿಸಿದ್ದಾರೆ. ಸಿಂಹಗಳ ವಿಡಿಯೋವನ್ನು ಒಂದೂವರೆ ಲಕ್ಷ ಜನ ವೀಕ್ಷಿಸಿದ್ದು, 2.7 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ. 15 ಲಕ್ಷಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...