ಹಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಸಂಬಂಧದಲ್ಲಿ ಮಾವನಾಗ್ತಿದ್ದ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಘಟನೆ ಭಾನುವಾರ ನಡೆದಿದೆ. ಆರೋಪಿ ಆಗಾಗ ಪೀಡಿತೆ ಮನೆಗೆ ಬರ್ತಿದ್ದ ಎನ್ನಲಾಗಿದೆ. ಭಾನುವಾರ ಕೂಡ ಮನೆಗೆ ಬಂದ ವ್ಯಕ್ತಿ 10 ವರ್ಷದ ಹುಡುಗಿ ಹಾಗೂ 8 ವರ್ಷದ ಹುಡುಗಿಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ನಂತ್ರ ಪೀಡಿತೆ ಮನೆಗೆ ಬಂದವನು ಅತ್ಯಾಚಾರದ ಸುದ್ದಿ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸಂಜೆ ಬಾಲಕಿ ಮನೆಗೆ ಬಂದಾಗ ಸತ್ಯ ಹೊರಬಿದ್ದಿದೆ. ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಗೋಲುವನ್ನು ಪೊಲೀಸರು ಬಂಧಿಸಿದ್ದಾರೆ.