ಕೊರೊನಾ ಲಸಿಕೆಯನ್ನ ದೇಶಾದ್ಯಂತ ವಿತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ತಿದೆ. ಆದ್ಯತೆಯ ಆಧಾರದ ಮೇಲೆ ಈ ಲಸಿಕೆ ಸಿಗೋದ್ರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ ಹೊಂದೋಕೆ ಸ್ವಲ್ಪ ಜಾಸ್ತಿ ಸಮಯವೇ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಕೊರೊನಾ ವೈರಸ್ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ, ಭಾರತೀಯ ಜನತೆ ಕೊರೊನಾ ಲಸಿಕೆ ಪ್ರತಿಯೊಬ್ಬ ಪ್ರಜೆಗೆ ತಲುಪುವವರೆಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ನಿಲ್ಲಿಸಬಾರದು ಅಂತಾ ಅಭಿಪ್ರಾಯ ಪಟ್ಟಿದ್ದಾರೆ.
ಈ ಹೊಸ ಸಂಶೋಧನೆ ಪ್ರಕಾರ ಭಾರತದಲ್ಲಿ 64 ಪ್ರತಿಶತ ಜನತೆ ಕೊರೊನಾ ಲಸಿಕೆ ಸಿಗುವವರೆಗೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಕೊರೊನಾ ಮಾರ್ಗಸೂಚಿಗೆ ಬದ್ಧರಾಗಿ ಇರುವ ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನು ಕೊರೊನಾ ಮಾರ್ಗಸೂಚಿಗಳು ಬೇಡ ಎಂದು ಹೇಳಿದ 22 ಪ್ರತಿಶತ ಜನರ ಪೈಕಿ ಬಹುತೇಕ ಮಂದಿ 40ಕ್ಕಿಂತ ಹೆಚ್ಚು ವಯಸ್ಸಿನವರು ಅಂತಾ ಸಮೀಕ್ಷೆ ಹೇಳಿದೆ. ಇನ್ನುಳಿದ 23 ಪ್ರತಿಶತ ಜನತೆ ಲಸಿಕೆ ಸ್ವೀಕರಿಸಿದ ಬಳಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವ ಇರಾದೆ ಹೊಂದಿಲ್ಲ ಅನ್ನೋದು ತಿಳಿದುಬಂದಿದೆ.
64 ಪ್ರತಿಶತ ಮಹಿಳೆಯರು 62 ಪ್ರತಿಶತ ಪುರುಷರಿಗೆ ವಿರುದ್ಧವಾಗಿ ಅಭಿಪ್ರಾಯ ಹೊರಹಾಕಿದ್ದಾರೆ. ಅಂದರೆ ಕೊರೊನಾ ಸೋಂಕಿಗೆ ಈಡಾಗೋದ್ರ ಬದಲು ಮುನ್ನೆಚ್ಚರಿಕಾ ಕ್ರಮಗಳನ್ನ ಅನುಸರಿಸೋದೇ ಸರಿ ಅನ್ನೋದು ಮಹಿಳೆಯರ ಅಭಿಪ್ರಾಯವಂತೆ.