alex Certify Shocking: ಈತನ ಮನೆಯಲ್ಲಿತ್ತು ಬರೋಬ್ಬರಿ 48 ಆಕ್ಸಿಜನ್‌ ಸಿಲಿಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಈತನ ಮನೆಯಲ್ಲಿತ್ತು ಬರೋಬ್ಬರಿ 48 ಆಕ್ಸಿಜನ್‌ ಸಿಲಿಂಡರ್

ದೇಶದಲ್ಲಿ ಆಕ್ಸಿಜನ್​ ಸಿಲಿಂಡರ್​ಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ದೆಹಲಿಯ ಮನೆಯೊಂದರಲ್ಲಿ 48 ಆಕ್ಸಿಜನ್​ ಸಿಲಿಂಡರ್​ಗಳನ್ನ ವಶಕ್ಕೆ ಪಡೆಯಲಾಗಿದೆ.‌

ದೆಹಲಿ ಪೊಲೀಸರ ತಂಡ 32 ದೊಡ್ಡ ಹಾಗೂ 16 ಸಣ್ಣ ಸಿಲಿಂಡರ್​ಗಳನ್ನ ವಶಪಡಿಸಿಕೊಂಡಿದ್ದಾರೆ. ದೆಹಲಿಯ ನೈಋತ್ಯ ಭಾಗದಲ್ಲಿನ ಮನೆಯೊಂದರಲ್ಲಿ ಈ ದಾಳಿ ನಡೆದಿದೆ. ಕೃತಕ ಆಮ್ಲಜನಕ ಕೈಗಾರಿಕೆ ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಮನೆಯ ಮಾಲೀಕ ಅನಿಲ್​ ಕುಮಾರ್ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. ತನ್ನ ಉದ್ಯಮಕ್ಕೆ ಪರವಾನಿಗಿ ತೋರಿಸಲು ವಿಫಲನಾದ ಹಿನ್ನೆಲೆ 51 ವರ್ಷದ ಅನಿಲ್​ ಕುಮಾರ್​​ರನ್ನ ಬಂಧಿಸಲಾಗಿದೆ.

ದೊಡ್ಡ ಸಿಲಿಂಡರ್​ಗಳಿಂದ ಆಮ್ಲಜನಕವನ್ನ ಸಣ್ಣ ಸಿಲಿಂಡರ್​ಗೆ ವರ್ಗಾಯಿಸಿ ಅದನ್ನ 12,500 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೋರ್ಟ್​ನ ಆದೇಶದಂತೆ ಪೊಲೀಸರು ಅಗತ್ಯ ಇರುವವರಿಗೆ ವಶಪಡಿಸಿಕೊಂಡ ಸಿಲಿಂಡರ್​ಗಳನ್ನ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...