ದೇಶದಲ್ಲಿ ಆಕ್ಸಿಜನ್ ಸಿಲಿಂಡರ್ಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ದೆಹಲಿಯ ಮನೆಯೊಂದರಲ್ಲಿ 48 ಆಕ್ಸಿಜನ್ ಸಿಲಿಂಡರ್ಗಳನ್ನ ವಶಕ್ಕೆ ಪಡೆಯಲಾಗಿದೆ.
ದೆಹಲಿ ಪೊಲೀಸರ ತಂಡ 32 ದೊಡ್ಡ ಹಾಗೂ 16 ಸಣ್ಣ ಸಿಲಿಂಡರ್ಗಳನ್ನ ವಶಪಡಿಸಿಕೊಂಡಿದ್ದಾರೆ. ದೆಹಲಿಯ ನೈಋತ್ಯ ಭಾಗದಲ್ಲಿನ ಮನೆಯೊಂದರಲ್ಲಿ ಈ ದಾಳಿ ನಡೆದಿದೆ. ಕೃತಕ ಆಮ್ಲಜನಕ ಕೈಗಾರಿಕೆ ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಮನೆಯ ಮಾಲೀಕ ಅನಿಲ್ ಕುಮಾರ್ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. ತನ್ನ ಉದ್ಯಮಕ್ಕೆ ಪರವಾನಿಗಿ ತೋರಿಸಲು ವಿಫಲನಾದ ಹಿನ್ನೆಲೆ 51 ವರ್ಷದ ಅನಿಲ್ ಕುಮಾರ್ರನ್ನ ಬಂಧಿಸಲಾಗಿದೆ.
ದೊಡ್ಡ ಸಿಲಿಂಡರ್ಗಳಿಂದ ಆಮ್ಲಜನಕವನ್ನ ಸಣ್ಣ ಸಿಲಿಂಡರ್ಗೆ ವರ್ಗಾಯಿಸಿ ಅದನ್ನ 12,500 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೋರ್ಟ್ನ ಆದೇಶದಂತೆ ಪೊಲೀಸರು ಅಗತ್ಯ ಇರುವವರಿಗೆ ವಶಪಡಿಸಿಕೊಂಡ ಸಿಲಿಂಡರ್ಗಳನ್ನ ನೀಡಿದ್ದಾರೆ.