alex Certify ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯ ಕಾಣುತ್ತಿದೆ ಈ ಗ್ರಾಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯ ಕಾಣುತ್ತಿದೆ ಈ ಗ್ರಾಮ..!

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಥಾಟ್ರಿಯಲ್ಲಿನ ಮೂರು ಗ್ರಾಮಗಳು ದೇಶಕ್ಕೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯವನ್ನ ಪಡೆಯಲು ಸಜ್ಜಾಗಿವೆ.

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​ ಥಾತ್ರಿ ಅಥರ್​ ಜಾರ್ಗರ್​ ತಾಂಟಾ ಗ್ರಾಮಕ್ಕೆ ಭೇಟಿ ನೀಡಿ 2021ರ ಜನವರಿ 15ರ ಒಳಗಾಗಿ ಈ ಗ್ರಾಮಕ್ಕೆ ವಿದ್ಯುತ್​ ಸೌಕರ್ಯ ನೀಡೋದಾಗಿ ಅಭಯ ನೀಡಿದ್ರು.

ಲೆಫ್ಟಿನೆಂಟ್​ ಗವರ್ನರ್ ಮನೋಜ್​ ಸಿನ್ಹಾ ಜೊತೆ ಕೆಲ ದಿನಗಳ ಹಿಂದೆ ಸಭೆ ಸೇರಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ಇನ್ನೂ ವಿದ್ಯುತ್​ ಸೌಕರ್ಯ ಇಲ್ಲ ಎಂಬ ವಿಚಾರವನ್ನ ಬೆಳಕಿಗೆ ತಂದಿದ್ದರು. ಇದಾದ ಬಳಿಕ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈ ಹಳ್ಳಿಗಳಿಗೆ ವಿದ್ಯುತ್​ ಸೌಕರ್ಯ ನೀಡಲು ಎಲ್ಲಾ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ.

ಥಾಟ್ರಿ ಹಿಮಾಲಯ ಪರ್ವತದ ತಪ್ಪಲಿನಲ್ಲಿನ ಚೆನಾಬ್​ ನದಿ ದಡದಲ್ಲಿರುವ ಒಂದು ಸುಂದರವಾದ ಗ್ರಾಮ. ದಟ್ಟ ಕಾಡು ಹಾಗೂ ಅಲ್ಲಲ್ಲಿ ಹರಿಯುತ್ತಿರುವ ತೊರೆಗಳು ಈ ಗ್ರಾಮದ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿದೆ. 2010 ರಲ್ಲಿ ಪಟ್ಟಣವಾಗಿ ಬಡ್ತಿ ಪಡೆದ ಥಾಟ್ರಿ, ದೋಡಾದ ಜಿಲ್ಲಾ ಕೇಂದ್ರದಿಂದ ಸುಮಾರು 36 ಕಿಲೋಮೀಟರ್ ದೂರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...