alex Certify 3 ಅಡಿ ವರ, 4 ಅಡಿ ವಧು: ಸುದ್ದಿಯಲ್ಲಿದೆ ಈ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಅಡಿ ವರ, 4 ಅಡಿ ವಧು: ಸುದ್ದಿಯಲ್ಲಿದೆ ಈ ಮದುವೆ

ಲಾಕ್ ಡೌನ್ ಮಧ್ಯೆ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದಲ್ಲೂ ಒಂದು ಮದುವೆ ನೆರವೇರಿದೆ. 29 ವರ್ಷದ ವರ, 19 ವರ್ಷದ ವಧು ಕೈ ಹಿಡಿದಿದ್ದಾನೆ. ಆದ್ರೆ ಈ ಮದುವೆ ಹೆಚ್ಚು ಸುದ್ದಿಯಾಗಲು ಕಾರಣ ವಧು-ವರರ ಎತ್ತರ. ಒಬ್ಬರು 4 ಅಡಿಯಿದ್ರೆ ಇನ್ನೊಬ್ಬರು 3 ಅಡಿ ಎತ್ತರವಿದ್ದಾರೆ.

ಮಹಾರಾಷ್ಟ್ರದ ಶಿರ್ಪುರದಲ್ಲಿ 29 ವರ್ಷದ ರಾಜೇಂದ್ರ ಹಾಗೂ 19 ವರ್ಷದ ನಯನಾ ಮಧ್ಯೆ ವಿವಾಹ ನಡೆದಿದೆ. ಈ ಮದುವೆ ವಿಶೇಷವೆಂದ್ರೆ ವರನ ಎತ್ತರ ಮೂರು ಅಡಿಯಾದ್ರೆ ವಧುವಿನ ಎತ್ತರ 4 ಅಡಿ.

ವರ 10ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರೆ ವಧು 12ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾಳೆ. ಈ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದ್ರೆ ಕೊರೊನಾ ಮದುವೆಗೆ ಅಡ್ಡಿಯುಂಟು ಮಾಡಿತ್ತು. ಲಾಕ್ ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಇಬ್ಬರು ಮದುವೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...