alex Certify ವಧು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ಕುಳ್ಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ಕುಳ್ಳ…!

ಉತ್ತರಪ್ರದೇಶದ ಮುಜಾಫರ್ನಗರದ 26 ವರ್ಷದ ಅಜೀಮ್ ಎರಡು ಅಡಿ ಎತ್ತರವಿದ್ದಾರೆ. ಈ ಕಾರಣಕ್ಕೆ ಅವರಿಗೆ ಮದುವೆಯಾಗಲು ವಧು ಸಿಗುತ್ತಿಲ್ಲ.

ಆತ ಕಾಸ್ಮೇಟಿಕ್ ಅಂಗಡಿ ನಡೆಸುತ್ತಿದ್ದು, ಸಾಕಷ್ಟು ಸಂಪಾದಿಸಿದರೂ ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲವಂತೆ. ಹಲವು ಪ್ರಸ್ತಾವನೆಗಳು ಬಂದರು ಆತನ ಎತ್ತರದ ಕಾರಣಕ್ಕೆ ಕಂಕಣ ಭಾಗ್ಯ ಕೂಡಿ ಬರಲೇ ಇಲ್ಲ. ಈ ಕಾರಣಕ್ಕೆ ಆತ ತನಗೆ ಸಹಾಯ ಮಾಡುವಂತೆ ಪೊಲೀಸರನ್ನು ಕೋರಿದ್ದಾರೆ.

ಕಿಲಾಡಿಯ ಕೋರಿಕೆಗೆ ಪೊಲೀಸರು ಅಷ್ಟೇ ಚಾಕಚಕ್ಯತೆಯಿಂದ ಉತ್ತರಿಸಿ ಕಳಿಸಿದ್ದಾರೆ, ನೀವು ಸಾರ್ವಜನಿಕ ಸೇವೆ ಮಾಡಿ ಎಂದು ಸಲಹೆ ನೀಡಿ ಸಾಗುಹಾಕಿದ್ದಾರೆ.

ತಡರಾತ್ರಿ ದುಡುಕಿನ ನಿರ್ಧಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ –ಸಾವಿನ ಕುರಿತು ಅನುಮಾನ

ಈ ಬಗ್ಗೆ ಮಾತನಾಡಿರುವ ಪೊಲೀಸರು, ಮಧುವನ್ನು ಹುಡುಕಿಕೊಡುವಂತೆ ವಿನಂತಿಸಿ ನಮ್ಮ ಬಳಿ ಬಂದಿದ್ದರು. ನಮಗೆ ಏನು ಮಾಡಬೇಕೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ಈತ ತನ್ನ 21ನೇ ವಯಸ್ಸಿನಿಂದಲೇ ವಧುವಿನ ಹುಡುಕಾಟದಲ್ಲಿದ್ದು ಹುಡುಗಿ ಮಾತ್ರ ಸಿಗಲಿಲ್ಲ. ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೂ ಸಹ ನೆರವಾಗುವಂತೆ ಮನವಿಯನ್ನು ಮಾಡಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...