alex Certify ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್​ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ ಅತ್ಯಂತ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.​ ಅಂಬೇಡ್ಕರ್​ ಜೊತೆ ಕೆಲಸ ಮಾಡಿದ್ದರು. 1918ರಲ್ಲಿ ವಿಶ್ವಕ್ಕೆ ಸ್ಪ್ಯಾನಿಶ್​ ಫ್ಲೂ ಆವರಿಸಿದ್ದ ವೇಳೆ ಕೇವಲ್​ ಕೃಷ್ಣರಿಗೆ ಕೇವಲ 5 ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್​ ಕೃಷ್ಣ ಮಾಹಿತಿ ನೀಡಿದ್ರು.

ಇನ್ನು ಈ ವಿಚಾರವಾಗಿ ಮಾತನಾಡಿದ ಅನಿಲ್​ ಕೃಷ್ಣ, ಮಾರ್ಚ್​ 2020ರಲ್ಲಿ ಲಾಕ್​ಡೌನ್​ ಆದೇಶ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇವಲ್​ ಕೃಷ್ಣ ಲಸಿಕೆಯ ಕಾರಣಕ್ಕಾಗಿ ಮನೆಯಿಂದ ಹೊರ ಬಂದಿದ್ದಾರೆ. ಲಾಕ್​ಡೌನ್​ ಜಾರಿಯಾದಾಗಿನಿಂದ ನಾವು ಅವರನ್ನ ಮನೆಯಲ್ಲೇ ಸುರಕ್ಷಿತವಾಗಿ ಇರಿಸಿದ್ದೆವು. ಇಂದು ಕೊರೊನಾ ಲಸಿಕೆಗಾಗಿ ಅವರು ಬಂದಿದ್ದಾರೆ ಎಂದು ಹೇಳಿದ್ರು. ಲಸಿಕೆ ಸ್ವೀಕರಿಸಿದ ಬಳಿಕ ಕೇವಲ್​ ಕೃಷ್ಣರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಮನೆಗೆ ತೆರಳಿದ ಕೇವಲ್​ ಕೃಷ್ಣ ಪೂಜಾ ಕಾರ್ಯಗಳನ್ನ ನೆರವೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...